Tuesday, April 30, 2024
spot_imgspot_img
spot_imgspot_img

ಪಪ್ಪಾಯಿಯ ಔಷಧೀಯ ಗುಣ

- Advertisement -G L Acharya panikkar
- Advertisement -

ಪಪ್ಪಾಯಿ ಹಣ್ಣು ದೇಹಕ್ಕೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ಹಣ್ಣನ್ನು ಹಸಿಯಾಗಿ, ಇಲ್ಲವೇ ಹಣ್ಣಾದ ನಂತರವೂ ಸಹ ನೀವು ತಿನ್ನಬಹುದು. ಬಹುತೇಕರು ಪಪ್ಪಾಯಿ ಹಣ್ಣನ್ನು ಇತರೆ ಹಣ್ಣುಗಳ ಸಲಾಡ್ ಜೊತೆ ತಿನ್ನುತ್ತಾರೆ.

ಪಪ್ಪಾಯಿ ಹಣ್ಣನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ತೂಕ ಇಳಿಕೆಯಿಂದ ಹಿಡಿದು, ಋತುಚಕ್ರ ಸಮಸ್ಯೆ ಪರಿಹಾರದವರೆಗೆ ಪಪ್ಪಾಯಿ ಹಣ್ಣನ್ನು ತಿನ್ನಲಾಗುತ್ತದೆ. ಪಪ್ಪಾಯಿ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಪ್ಪಾಯಿ ಹಣ್ಣಿನ ಜೊತೆಗೆ ಅದರ ಎಲೆ ಮತ್ತು ಬೀಜಗಳು ಅನೇಕ ರೋಗಗಳ ವಿರುದ್ಧ ಹೋರಾಟ ಮಾಡುತ್ತವೆ. ಜೊತೆಗೆ ಪಪ್ಪಾಯಿ ಹಣ್ಣು ದೇಹಕ್ಕೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ಹಣ್ಣನ್ನು ಹಸಿಯಾಗಿಯೂ ತಿನ್ನಬಹುದು. ಇಲ್ಲವೇ ಮಾಗಿದ ಮೇಲೆ ಅಂದ್ರೆ ಹಣ್ಣಾದ ನಂತರವೂ ಸಹ ನೀವು ತಿನ್ನಬಹುದು.

ಒಣ ಚರ್ಮಕ್ಕೆ ಪಪ್ಪಾಯಿ ಅತ್ಯುತ್ತಮ ನೈಸರ್ಗಿಕ ಮದ್ದಾಗಿದೆ ಪಪ್ಪಾಯಿಯಲ್ಲಿ ಇರುವಂತಹ ವಿಟಮಿನ್‌ ಎ ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು…

ಪಪ್ಪಾಯಿ ಹಣ್ಣನ್ನು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸೇರಿ ಹಲವು ಪೋಷಕಾಂಶಗಳು ಸೇರಿವೆ.ಪಪ್ಪಾಯಿಯಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಹಾಗೂ ಅಗತ್ಯ ಪೋಷಕಾಂಶಗಳು ಇವೆ. ಪಪ್ಪಾಯಿ ತಿನ್ನೋದು ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ತಂದು ಕೊಡುತ್ತದೆ.

ಪಪ್ಪಾಯಿ ಹಣ್ಣು ಅದರ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಿಂದ ಹೆಚ್ಚು ಸಮೃದ್ಧವಾಗಿದೆ. ತಜ್ಞರು ಪಪ್ಪಾಯಿ ಹಣ್ಣನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಜೀರ್ಣಾಂಗ ರೋಗ, ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಪ್ಲೇಟ್ಲೆಟ್ ಗಳನ್ನು ಹೆಚ್ಚಿಸುತ್ತದೆ.

ಋುತುಚಕ್ರಕ್ಕೂ ನಾಲ್ಕೈದು ದಿನ ಮುನ್ನ ಪಪ್ಪಾಯಿಹಣ್ಣನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿಹಣ್ಣಿನಲ್ಲಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, ಪಪಿಯನ್‌ಗಳು ಇವೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸುಲಭವಾಗಿ ಆಗುವಂತೆ ಕೂಡ ಮಾಡುತ್ತದೆ.

- Advertisement -

Related news

error: Content is protected !!