Monday, April 29, 2024
spot_imgspot_img
spot_imgspot_img

ಮೊಳಕೆ ಕಾಳುಗಳ ಉಪಯೋಗ

- Advertisement -G L Acharya panikkar
- Advertisement -

ಮೊಳಕೆ ಕಾಳುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇವು ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ. ನಿತ್ಯ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

ತಜ್ಞರ ಪ್ರಕಾರ ಹುರಿದ ಆಹಾರಗಳಿಗಿಂತ ಹತ್ತು ಪಟ್ಟು ಹೆಚ್ಚು ಸತ್ವ ಮೊಳಕೆ ಬರಿಸಿದ ಆಹಾರದಲ್ಲಿ ಲಭ್ಯವಾಗುತ್ತದೆ.

ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಅನೇಕರು ತಮ್ಮ ಆಹಾರ ಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳುತ್ತಾರೆ. ಮೊಳಕೆ ಕಾಳುಗಳು ಜೀರ್ಣಿಸಿಕೊಳ್ಳಲು ಕಷ್ಟಕರವಾದ ಮತ್ತು ಮಲಗುವಾಗ ತೊಂದರೆಯನ್ನುಂಟು ಮಾಡುವ ಆಹಾರಗಳನ್ನು ಸೇವಿಸಬೇಡಿ. ಸಣ್ಣ ದ್ವಿದಳ ಧಾನ್ಯಗಳು ಮತ್ತು ಮೊಳಕೆ ಕಾಳುಗಳು ಜೀರ್ಣಿಸಿಕೊಳ್ಳಲು ತುಂಬಾನೇ ಸುಲಭ. ಆದರೆ ನೀವು ರಾತ್ರಿ ಊಟಕ್ಕೆ ಅಂತ ಮೊಳಕೆ ಕಾಳುಗಳನ್ನು ತಿನ್ನುತ್ತಿದ್ದರೆ, ಅವುಗಳನ್ನು ರೊಟ್ಟಿ ಅಥವಾ ಅನ್ನದೊಂದಿಗೆ ಸೇರಿಸಿಕೊಂಡು ತಿನ್ನಿರಿ.

ಹಸಿ ಮೊಳಕೆ ಕಾಳುಗಳನ್ನು ನಮ್ಮ ಹೊಟ್ಟೆ ಜೀರ್ಣಿಸಿಕೊಳ್ಳುವುದು ಬಹಳ ನಿಧಾನ. ಜೀರ್ಣಕ್ರಿಯೆ ಸರಿಯಾಗಿಲ್ಲದ ಮಂದಿ, ಅಸಿಡಿಟಿ ಹಾಗೂ ಇತರ ಜೀರ್ಣಕ್ರಿಯೆ ಸಮಸ್ಯೆಗಳನ್ನು ಮೊದಲೇ ಹೊಂದಿರುವ ಮಂದಿ ಈ ಹಸಿ ಮೊಳಕೆ ಕಾಳುಗಳನ್ನು ಸೇವಿಸಿದರೆ ಸಮಸ್ಯೆಗಳುಂಟಾಗಬಹುದು. ಹಾಗಾಗಿ ಇಂಥವರು ಬೇಯಿಸಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದಷ್ಟೇ ಅಲ್ಲ, ಬ್ಯಾಕ್ಟೀರಿಯಾಗಳೂ ಹೊಟ್ಟೆ ಸೇರಿ ಹೊಟ್ಟೆ ಕೆಡುವುದು ತಪ್ಪುತ್ತದೆ.
ಮಾಂಸ, ಮೀನು, ಮೊಟ್ಟೆಯಲ್ಲಿ ಇರುವಷ್ಟೇ ಪ್ರೊಟೀನ್ ಗಳು ಮೊಳಕೆ ಕಾಳುಗಳಲ್ಲೂ ಇವೆ.

ಇದು ಪೋಷಕಾಂಶಗಳನ್ನು ಸಮತೋಲನದಲ್ಲಿರಿಸಿ, ಅನಾವಶ್ಯಕ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುತ್ತದೆ. ಇದರಲ್ಲಿರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳನ್ನು ದೃಢಪಡಿಸುತ್ತದೆ. ಇದರಲ್ಲಿ ವಿಟಮಿನ್ ಎ ಅಂಶವೂ ಹೇರಳವಾಗಿದ್ದು, ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಸುಧಾರಣೆಗೆ ನೆರವಾಗುತ್ತದೆ.

ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇದನ್ನು ಸೇವಿಸಲು ಕೊಡುವುದು ಬಹಳ ಒಳ್ಳೆಯದು. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಥವಾ ಗೆಡ್ಡೆಗಳು ಬೆಳೆಯದಂತೆ ಇದು ನೋಡಿಕೊಳ್ಳುತ್ತದೆ ಎನ್ನಲಾಗಿದೆ. ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

- Advertisement -

Related news

error: Content is protected !!