Sunday, May 5, 2024
spot_imgspot_img
spot_imgspot_img

ಬಂಟ್ವಾಳ: ದೇಶದಲ್ಲೇ ಮೊದಲ ಬಾರಿಗೆ ಅಪರೂಪದ ಕಲ್ಲು ಹೂವು “ಉಸ್ನೆಯಾ ಹಿರ್ಟಾ” ಪತ್ತೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ: ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿನಾಯಕ್ ಕೆ.ಎಸ್. ನೇತೃತ್ವದ ಸಂಶೋಧನ ತಂಡವು ಭಾರತದಲ್ಲೇ ಮೊದಲ ಬಾರಿಗೆ “ಉಸ್ನೆಯ ಹಿರ್ಟಾ’ (Usnea hirta)ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಚಿಕ್ಕಮಗಳೂರಿನ ಮುಳ್ಳಯ್ಯನಗರಿಯಲ್ಲಿ ಪತ್ತೆಹಚ್ಚಿದೆ.

ಈ ಪ್ರಭೇದವು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದಾಗಿದ್ದು, 1500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಮಾತ್ರ ಉತ್ಪತ್ತಿ ಆಗಲು ಸಾಧ್ಯ. ಇದು ವಾತಾವರಣದ ಮಾಲಿನ್ಯಕ್ಕೆ ಬೇಗ ನಶಿಸಿಹೋಗುವ ಪ್ರಭೇದವಾಗಿದ್ದು ಅತ್ಯಂತ ಕಡಿಮೆ ಮಾಲಿನ್ಯ ಇರುವ ಪ್ರದೇಶದಲ್ಲಿ ಮಾತ್ರ ಅಪರೂಪವಾಗಿ ದೊರೆಯುತ್ತದೆ.

ಪ್ರಪಂಚದ ಕೆಲವೇ ದೇಶಗಳಾದ ಫಿಲಿಫೈನ್ಸ್, ಅಸ್ಟ್ರೇಲಿಯಾ, ಕ್ಯಾಲಿಫೋರ್ನಿಯ, ಪಶ್ಚಿಮ ಆಫ್ರಿಕಾ ದೇಶದಲ್ಲಿ ಕಾಣಸಿಗುವ ಈ ಕಲ್ಲು ಹೂವಿನ ಕುರಿತು, ಜರ್ನಲ್ ಆಫ್ ತ್ರಿಟನ್ ಟ್ಯಾಕ್ಸ್ ಎಂಬ ವಿಜ್ಞಾನ ಪತ್ರಿಕೆಯ ಫೆಬ್ರವರಿ ತಿಂಗಳಿನ ವಿಶೇಷ ಆವೃತ್ತಿಯಲ್ಲಿ ಅವರು ಬರೆದ ಲೇಖನ ಪ್ರಕಟವಾಗಿರುತ್ತದೆ. ಇದುವರೆಗೆ ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 57, ಕರ್ನಾಟಕದಲ್ಲಿ 8 ಕಲ್ಲು ಹೂಗಳ ಪ್ರಭೇದ ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

usnea hirta (representative image)

ಈ ಪ್ರಭೇದದ ಕಲ್ಲು ಹೂಗಳು ವಿಶಿಷ್ಟ ರೀತಿಯ ಆವಾಸಸ್ಥಾನಕ್ಕೆ ಹೊಂದಿಕೊಂಡಿದ್ದು ಅವುಗಳ ಆವಾಸಸ್ಥಾನ ನಾಶವಾದರೆ ಪ್ರಕೃತಿಯಿಂದ ಇವುಗಳು ಕೂಡ ವಿನಾಶ ಹೊಂದುತ್ತವೆ. ಹಾಗಾಗಿ ಇವುಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ತಂಡದಲ್ಲಿ ಅರ್ಚನಾ ಆರ್. ಮೇಸ್ತ ಮತ್ತು ಎನ್. ರಾಜೇಶ್ವರಿ ಇದ್ದರು.

ಶುದ್ಧ ಪರಿಸರದಲ್ಲಿ ಮಾತ್ರ ಬೆಳೆಯುವ ವಿಶೇಷ ಸಸ್ಯ.!
ಗಾಳಿಯು ಮಾಲಿನ್ಯ ರಹಿತವಾಗಿರುವಲ್ಲಿ, ಅವು 10-20 ಸೆಂ.ಮೀ ಉದ್ದದವರೆಗೆ ಬೆಳೆಯುತ್ತವೆ. ಇದನ್ನು ಕೆಲವೊಮ್ಮೆ ಬಯೋ ಇಂಡಿಕೇಟರ್ ಆಗಿ ಬಳಸಬಹುದು, ಏಕೆಂದರೆ ಗಾಳಿಯು ಶುದ್ಧ ಮತ್ತು ಉತ್ತಮ ಗುಣಮಟ್ಟದ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ.

- Advertisement -

Related news

error: Content is protected !!