ಉತ್ತರ ಪ್ರದೇಶ: ಲಾಕ್‌ಡೌನ್ ನಡುವೆಯೂ ಯಾವುದೇ ಅನುಮತಿ ಇಲ್ಲದೆ ಬಿಂದಾಸ್ ಪಾರ್ಟಿಯಲ್ಲಿ ತೊಡಗಿದ್ದ 15 ಯುವತಿಯರು ಸೇರಿ 61 ಜನರನ್ನು ಬಂಧಿಸಿರುವ ಘಟನೆ ಥಾನಾ ಹೆದ್ದಾರಿಯ ಸೆಕ್ಟರ್-135ರಲ್ಲಿನ ಚೌಧರಿ ಫಾರ್ಮ್ ಹೌಸ್‌ನಲ್ಲಿ ನಡೆದಿದೆ.

ಯುವಕ-ಯುವತಿಯರು ಮಾತ್ರವಲ್ಲದೇ ಪಾರ್ಟಿಯನ್ನು ಆಯೋಜಿಸಿದ್ದ ಐವರನ್ನು ಸಹ ನೊಯ್ಡಾ ಪೊಲೀಸರು ಬಂಧಿಸಿದ್ದಾರೆ. ಎಲ್ಲರು ಸಹ ಪಾನಮತ್ತ ಸ್ಥಿತಿಯಲ್ಲಿದ್ದು, ಸ್ಥಳದಲ್ಲಿ ಭಾರಿ ಪ್ರಮಾಣದ ಹರಿಯಾಣ ಮರ್ಕಾ ಮದ್ಯವನ್ನು ಲಭ್ಯವಾಗಿದೆ. ಪೊಲೀಸರು ಮಾತ್ರವಲ್ಲದೆ ಬಂಧಿತರ ವಿರುದ್ಧ ಅಬಕಾರಿ ಇಲಾಖೆಯು ಸಹ ಪ್ರಕರಣ ದಾಖಲಿಸಿಕೊಂಡಿದೆ.

ಖಚಿತ ಮಾಹಿತಿ ಪಡೆದ ನೊಯ್ಡಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ 46 ಪುರುಷರು ಹಾಗೂ 15 ಯುವತಿಯರನ್ನು ಬಂಧಿಸಲಾಗಗಿದೆ.


ಪಾರ್ಟಿ ಆಯೋಜನೆ ಮಾಡಿದ್ದ ಸೊಹೈಲ್, ಅಂಕುರ್, ಬಿಲಾಲ್, ವಕಿಲ್, ಶಹನವಾಜ್ ಹಾಗೂ ಧರ್ಮಾವೀರ್ ಎಂಬುವರನ್ನು ಬಂಧಿಸಲಾಗಿದೆ. ಈ ವೇಳೆ ಭಾರಿ ಪ್ರಮಾಣ ಹರಿಯಾನ ಮರ್ಕಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.