Friday, September 18, 2026
spot_imgspot_img
spot_imgspot_img

ಉಮೇಶ್ ಪಾಲ್ ಹತ್ಯೆ ಕೇಸ್‌; ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

- Advertisement -
- Advertisement -
vtv vitla

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ, ಗ್ಯಾಂಗ್‌ ಸ್ಟಾರ್‌ ಅತಿಕ್‌ ಅಹ್ಮದ್‌ ಪುತ್ರ ಅಸಾದ್‌ ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನ ಮನೆಯ ಹೊರಗೆ ಗುಂಡು ಹಾರಿಸಿ ಉಮೇಶ್ ಪಾಲ್ ನನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಅಸದ್ ಅಹ್ಮದ್ ಮತ್ತು ಗುಲಾಮ್ ತಲೆಗೆ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಪೊಲೀಸರ ಪ್ರಕಾರ ಆರೋಪಿಗಳು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ತಂಡದ ಮೇಲೆ ಗುಂಡು ಹಾರಿಸಿದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು. ಮೃತ ಆರೋಪಿಗಳಿಂದ ಅತ್ಯಾಧುನಿಕ ಆಯುಧಗಳು, ಹೊಸ ಸೆಲ್‌ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಮೇಶ್ ಪಾಲ್ ಎಂಬ ವಕೀಲರು 2005ರಲ್ಲಿ ಬಿ ಎಸ್ ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದರು. ಫೆಬ್ರವರಿ 24 ರಂದು, ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ದಾಳಿ ಮಾಡಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಸಮಾಜವಾದಿ ಪಕ್ಷದ ಮಾಜಿ ಸಂಸದರಾಗಿದ್ದ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಅಪಹರಣ ಪ್ರಕರಣದಲ್ಲಿ ಕಳೆದ ತಿಂಗಳು ಶಿಕ್ಷೆಗೊಳಗಾಗಿದ್ದರು.

- Advertisement -

Related news

error: Content is protected !!