Monday, April 29, 2024
spot_imgspot_img
spot_imgspot_img

ಕಡೇಶಿವಾಲಯ : ವಾಲ್ಮೀಕಿ ಆಶ್ರಮ ಶಾಲೆ, ಕಡೇಶಿವಾಲಯ ಬಂಟ್ವಾಳ ತಾಲೂಕು ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ

- Advertisement -G L Acharya panikkar
- Advertisement -

ಕಡೇಶಿವಾಲಯ :ವಾಲ್ಮೀಕಿ ಆಶ್ರಮ ಶಾಲೆ, ಕಡೇಶಿವಾಲಯ ಬಂಟ್ವಾಳ ತಾಲೂಕು ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ
ಕಾರ್ಯಕ್ರಮವು ದಿನಾಂಕ 30-12-2023 ಶನಿವಾರದಂದು ನಡೆಯಿತು.

ಓದು ಬರಹದ ಜೊತೆಗೆ ಪಠ್ಯೇತರ ಚಟುಚಟಿಕೆಗೆ ಅವಕಾಶ ನೀಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಗಲು ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯವೆಂದು ವಾಲ್ಮೀಕಿ ಆಶ್ರಮ ಶಾಲೆ, ಕಡೇಶಿವಾಲಯದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಶಾರದಾ ಪ್ರೌಢಶಾಲೆ, ಪಾಣೆಮಂಗಳೂರಿನ ಕನ್ನಡ ಪ್ರಾಧ್ಯಾಪಕರಾದ ಧನರಾಜ್ ಡಿ.ಆರ್. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿ ಶಕ್ತಿ, ಧೈರ್ಯ ಶಕ್ತಿ ಹೆಚ್ಚಿ ಭಯ ಹೋಗಲಾಡಿಸಬಹುದು. ಮಕ್ಕಳಿಗೆ ಅವಕಾಶ ನೀಡಲು ಶ್ರಮಿಸಿದ ಶಾಲಾ ಸಿಬ್ಬಂದಿಗಳ ಕಾರ್ಯವನ್ನು ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಯಸ್. ರಾವ್ ಸಮಾರಂಭದ ದೀಪ ಬೆಳಗಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಮೇಲ್ವಿಚಾರಕಿ ಭವ್ಯ ಪಿ. ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ ಕೆ., ಮಾಜಿ ಸದಸ್ಯರಾದ ಜಯ ಆರ್., ಆಶ್ರಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ವೀರಪ್ಪ ನಾಯ್ಕ, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ವಿದ್ಯಾಕುಮಾರಿ ಎ, ಸ್ವಾಗತಿಸಿದರು. ಶಿಕ್ಷಕಿ ಯಶೋಧ ಯಸ್. ವಂದಿಸಿದರು. ಶಿಕ್ಷಕಿಯರಾದ ಧನಲಕ್ಷ್ಮೀ ಕೆ. ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವನಿತಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಬೋಧಕೇತರ ಸಿಬ್ಬಂದಿಗಳಾದ ಜಾನಕಿ, ಶೈಲಜಾ ಬಿ., ಶಾರದಾ, ದಿವ್ಯ ಸಹಕರಿಸಿದರು.

- Advertisement -

Related news

error: Content is protected !!