- Advertisement -
- Advertisement -
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿ ನಡುವೆ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ.

ಎಲ್ಲ ಮಾರುಕಟ್ಟೆಗಳಿಗೂ ವಿವಿಧ ರೀತಿಯ ಹೂವುಗಳು ಲಗ್ಗೆಯಿಟ್ಟು, ಗ್ರಾಹಕರನ್ನು ಕೈಬಿಸಿ ಕರೆಯುತ್ತಿದೆ. ಆದ್ರೆ ಹೂ, ಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದು ಕೆ.ಜಿ ಮಲ್ಲಿಗೆಗೆ 600 ರೂ.ಆಗಿದೆ. ಬಿಡಿ ಹೂವಿನ ದರ 350 ರೂ.ಯಿಂದ 400ರೂ.ಆಗಿದೆ. ಲಕ್ಷ್ಮಿಗೆ ಪ್ರೀಯವಾದ ತಾವರೆ ಹೂವಿಗೆ ಒಂದಕ್ಕೆ 50 ರೂ.ಯಿದೆ. 1 ಕೆ.ಜಿ ಆ್ಯಪಲ್ ದರ 260 ರೂ.ಆಗಿದೆ.

- Advertisement -