Sunday, October 6, 2024
spot_imgspot_img
spot_imgspot_img

ಶಿಕ್ಷಣ ಸಚಿವರೇ ನೀವು ಈ ಸ್ಟೋರಿ ನೋಡಲೇಬೇಕು..

- Advertisement -
- Advertisement -

ಕಡಬ:-ಕೋವಿಡ್‌-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ಆರಂಭಗೊಂಡಿವೆ.
ಸರ್ಕಾರ ಆನ್‌ಲೈನ್‌ ತರಗತಿಗೆ ಉತ್ತೇಜನ ನೀಡಬೇಕು ಎಂದು ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಉದಾಹರಣೆಗೆ ಈ ಸ್ಟೋರಿ ನೋಡಿ.

ಈ ಸ್ಟೋರಿ ಯನ್ನ ರಾಜ್ಯ ಶಿಕ್ಷಣ ಸಚಿವರು ಹಾಗೂ ಸುಳ್ಯ ಶಾಸಕರು ನೋಡಲೇ ಬೇಕು.

ಕಲಿಕೆಯಲ್ಲಿ ಮುಂದಿರುವ ಈ ಬಾಲಕನ ಹೆಸರು ವರುಣ್.ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ. ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆ,ಅನಾರೋಗ್ಯ ಪೀಡಿತ ತಂದೆಗೆ ಆಸರೆಯಾಗಬೇಕು ಎಂಬುದು ಈತನ ಅಭಿಲಾಷೆ. ಆದರೆ ತನ್ನ ಕುಟುಂಬದ ಬಡತನ ಇದಕ್ಕೆ ಆಸ್ಪದ ನೀಡುತ್ತಿಲ್ಲ.ವರುಣ್ ತಂದೆ ಮೋನಪ್ಪ ಕುಂಬಾರರು ಮೋದಲೇ ಅನಾರೋಗ್ಯ ಪೀಡಿತರು.ತಾಯಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಂಗಿಯೋರ್ವರು ಎಂಟನೇ ತರಗತಿ ಓದುತ್ತಿದ್ದಾರೆ.

ಬಡತನದಲ್ಲಿ ದಿನದೂಡುತ್ತಿರುವ ವರುಣ್ ಮನೆಯಲ್ಲಿ ಆನ್ಲೈನ್ ತರಗತಿಗೆ ಬೇಕಾದ ಒಂದು ಟಿವಿಯಾಗಲೀ, ಸ್ಮಾರ್ಟ್ ಫೋನ್ ಆಗಲೀ ಇಲ್ಲ. ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯಾಗಲೀ,ಶೌಚಾಲಯವಾಗಲೀ ಇಲ್ಲ. ಎಲ್ಲಾ ಮಕ್ಕಳು ಟಿವಿ, ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರಬೇಕಾದರೆ ಈ ಮಕ್ಕಳು ಮತ್ತು ಇವರ ಪೋಷಕರು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ.

ಸರ್ಕಾರ ಆನ್‌ಲೈನ್‌ ತರಗತಿಗೆ ಉತ್ತೇಜನ ನೀಡಬೇಕು ಎಂದು ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಉದಾಹರಣೆಗೆ ಈ ಸ್ಟೋರಿ ನೋಡಿ.

Posted by VTV on Monday, 27 July 2020

ಕಳೆದ 5 ದಿನಗಳಿಂದ ಪಾಠ ಸಿಕ್ಕಲ್ಲ ಅನ್ನೋ ಯಾತನೆಯಲ್ಲಿದ್ದಾರೆ. ಈಗ ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾದ್ರೂ ಈ ಮಕ್ಕಳಿಗೆ ಆ ಪಾಠ ವೀಕ್ಷಿಸಲು ಅವಕಾಶವಿಲ್ಲ. ಒಂದು ಕರೆಂಟ್ ಸಮಸ್ಯೆವಿದ್ದರೇ, ಪಾಠದ ವಿಷಯ ಯೂಟ್ಯೂಬ್ ಗೆ ಅಪ್ ಲೋಡ್ ಆದರೂ ಇವರಿಗೆ ಅದನ್ನ ನೋಡುವ ಭಾಗ್ಯವಿಲ್ಲ.ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ಒಂದು ಕಡೆಯಾದರೇ ಸ್ಮಾರ್ಟ್ ಪೋನ್ ,ಹೊಂದಿಲ್ಲದ ಕುಟುಂಬಕ್ಕೆ ಸರ್ಕಾರದ ಶಿಕ್ಷಣ ಹೇಗೆ ತಲುಪಬೇಕು ಎಂಬುದು ಎಲ್ಲರ ಪ್ರಶ್ನೆ.? ನಿಜಕ್ಕೂ ಈ ಮಕ್ಕಳ ಕತೆ ಕೇಳಿದರೆ ಕಣ್ಣೀರು ಬರುತ್ತೆ.

ಒಟ್ಟಿನಲ್ಲಿ ಸರ್ಕಾರವು ಗ್ರಾಮೀಣ ಭಾಗದ ಈ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯದ ಕುರಿತಾಗಿಯೂ ಚಿಂತಿಸಬೇಕಾಗಿದೆ.ಮಾತ್ರವಲ್ಲದೆ ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡುವ ಮೂಲಕ ಈ ಮಕ್ಕಳ ಬಾಳಿಗೆ ಬೆಳಕಾಗಬೇಕಿದೆ.

Varun Kumar
S/o Susheela
Kelagina mane doddakoppa
Kodimbala village & post
Puttur tq
Kodimbala-574221

Mobile- 9743408134 Prakash
9741235436 Monappa Koppa

- Advertisement -

Related news

error: Content is protected !!