Thursday, July 30, 2026
spot_imgspot_img
spot_imgspot_img

ವಿಟ್ಲ: ಕಾಡುಕೋಣಗಳ ಅಟ್ಟಹಾಸದಿಂದ ಅಡಿಕೆ ಸಸಿಗಳ ಧ್ವಂಸ; ವೀರಕಂಬ ಗ್ರಾಮದಲ್ಲಿ ಕಂಗಾಲಾದ ಕೃಷಿಕರು!!

- Advertisement -
- Advertisement -

ವಿಟ್ಲ: ವೀರಕಂಬ ಗ್ರಾಮದ ಕೆಲಿಂಜ ಸಮೀಪದ ಕಲ್ಮಲೆ ಸುತ್ತಮುತ್ತಲಿನ ಕೃಷಿಕರು ಕಾಡುಕೋಣಗಳ ಹಾವಳಿಯಿಂದಾಗಿ ತತ್ತರಿಸಿದ್ದಾರೆ.

ಕಲ್ಮಲೆ ವಿಠಲ ರೈ ಯವರ ಅಡಿಕೆ ತೋಟಕ್ಕೆ ಕಳೆದ ಐದಾರು ದಿನಗಳಲ್ಲಿ ದಾಳಿಯಿಟ್ಟ ಎರಡು ಕಾಡುಕೋಣಗಳು 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮತ್ತು ತೆಂಗಿನ ಗಿಡಗಳನ್ನು ನುಚ್ಚುನೂರಾಗಿಸಿವೆ.

ವರ್ಷದ ಹಿಂದೆ ಇದೇ ರೀತಿ ದಾಳಿಯಿಟ್ಟಿದ್ದ ಕಾಡುಕೋಣಗಳು 200ಕ್ಕೂ ಹೆಚ್ಚು ಆಡಿಕೆ, ತೆಂಗು ನಾಶಪಡಿಸಿದೆಯೆಂದು ಮಾಲಿಕರು ಅಲವತ್ತುಕೊಂಡಿದ್ದಾರೆ. ಇದೀಗ ಮತ್ತೆ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಒಂದೆಡೆ ಕೊರೊನಾ ಸಂಕಷ್ಟವಾದರೆ ಮತ್ತೊಂದೆಡೆ ಕಾಡುಕೋಣಗಳ ಹಾವಳಿಯಿಂದ ಕೃಷಿಕರು ಹೈರಾಣವಾಗಿದ್ದು ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಮೂಲಕ ಪರಿಹಾರ ನೀಡಬೇಕಾಗಿದೆ.

- Advertisement -

Related news

error: Content is protected !!