Sunday, May 12, 2024
spot_imgspot_img
spot_imgspot_img

ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಯಿತೇ ವೀರಕಂಭ ಗ್ರಾ.ಪಂ.ವ್ಯಾಪ್ತಿಯ ಕೆಲಿಂಜ ಪರಿಸರದ ಬೀದಿ ದೀಪಗಳು; ಗ್ರಾಮ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ-ಸಭಾತ್ಯಾಗ

- Advertisement -G L Acharya panikkar
- Advertisement -

ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಿಂಜ ಬೊಣ್ಯಕುಕ್ಕು ಪರಿಸರದಲ್ಲಿ ಬೀದಿ ದೀಪಗಳು ಉರಿಯದೆ ಕತ್ತಲಲ್ಲಿ ಮುಳುಗಿದ್ದು ಈ ಬಗ್ಗೆ ಕ್ರಮ ವಹಿಸಬೇಕಾದ ಪಂಚಾಯತ್ ಮೌನ ತಾಳಿದೆ ಜನತೆ ಪಂಚಾಯತ್ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಕೆಲವೇ ದಿನಗಳಲ್ಲಿ ವೈಭವದ ಕೆಲಿಂಜ ಮೆಚ್ಚಿ ಜಾತ್ರೆ ನಡೆಯಲಿದ್ದು ಈ ಸಂದರ್ಭದಲ್ಲಿ ಊರು ಪೂರ್ತಿ ಕತ್ತಲಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ಖಂಡಿಸಿ ಇಂದು ನಡೆದ ವೀರಕಂಭ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಿಂದ ನಾಲ್ಕನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಸದಸ್ಯರಾರ ಜಯಪ್ರಸಾದ್, ಸಂದೀಪ್, ಉಮಾವತಿ ಸಭಾತ್ಯಾಗ ನಡೆಸಿದರು.

ಇವರಿಗೆ ಬೆಂಬಲಿಸಿ ಉಳಿದ ಬಿಜೆಪಿ ಬೆಂಬಲಿತ ಸದಸ್ಯರಾದ ದಿನೇಶ್, ಜಯಂತಿ, ಮೀನಾಕ್ಷಿ, ಲಕ್ಷ್ಮಿ ಸಭಾತ್ಯಾಗ ಮಾಡಿದ ಕಾರಣ ಕೋರಂ ಕೊರತೆಯಿಂದ ಸಾಮಾನ್ಯ ಸಭೆ ರದ್ದಾಯಿತು. ಕೆಲಿಂಜ ಬೊಣ್ಯಕುಕ್ಕು ಪರಿಸರದ ಬೀದಿ ದೀಪ ದುರಸ್ತಿ ಮಾಡುವ ತನಕ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿದರು.

- Advertisement -

Related news

error: Content is protected !!