Sunday, April 28, 2024
spot_imgspot_img
spot_imgspot_img

ಮಳಲಿ ಮಸೀದಿ ವಿವಾದ: ಇಂದು ಪ್ರಕಟವಾಗಬೇಕಾಗಿದ್ದ ತೀರ್ಪು ಮತ್ತೆ ಮುಂದೂಡಿಕೆ

- Advertisement -G L Acharya panikkar
- Advertisement -

ಮಂಗಳೂರು: ಇಂದು ಮಳಲಿ ಮಸೀದಿ v/s ವಿಹೆಚ್’ಪಿ ಫೈಟ್ ಗೆ ಇಂದು ನಿರ್ಣಾಯಕ ದಿನ ಎಂದು ಹೇಳಲಾಗಿತ್ತು. ಆದರೆ ಇದೀಗ ಮತ್ತೆ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಮಳಲಿ ಮಸೀದಿ ವಿವಾದ ಬಗೆಗೆ ಇಂದು ಪ್ರಕಟವಾಗಬೇಕಾಗಿದ್ದ ತೀರ್ಪು ಮುಂದೂಡಿಕೆ ಮಾಡಲಾಗಿದೆ.

ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಮಸೀದಿ ನವೀಕರಣ ಮಾಡುವ ಸಂದರ್ಭದಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಇಂದು ತೀರ್ಪು ಪ್ರಕಟವಾಗಬೇಕಾಗಿತ್ತು. ಆದ್ರೆ ತೀರ್ಪನ್ನು ನವೆಂಬರ್‍ ೯ಕ್ಕೆ ಮುಂದೂಡಲಾಗಿದೆ. ಯಾವುದೇ ಆದೇಶ ಪ್ರಕಟಿಸದೇ ತೀರ್ಪು ಮುಂದೂಡಿಕೆ ಮಾಡಿದ ಜಿಲ್ಲಾ ಸಿವಿಲ್ ನ್ಯಾಯಾಲಯ.

ಈ ಹಿಂದೆ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು.

READ THIS : ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಸ್ಥಾನ ಪತ್ತೆ ಪ್ರಕರಣ; ಸಿವಿಲ್ ಕೋರ್ಟ್ ವಿಚಾರಣೆ ಮಾತ್ರ ಅವಕಾಶ ಆದೇಶ ಹೊರಡಿಸುವಂತಿಲ್ಲ: ಹೈಕೋರ್ಟ್ ತಾಕೀತು

ಮಂಗಳೂರು: ಮಳಲಿ ಮಸೀದಿಯ ಜಾಗದಲ್ಲಿ ಹಿಂದೂ ದೇವಾಲಯ ಇರುವುದರಲ್ಲಿ ಅನುಮಾನವಿಲ್ಲ; ತಾಂಬೂಲ ಪ್ರಶ್ನೆಯಲ್ಲಿ ಬಯಲಾಯ್ತು ಮಸೀದಿಯೊಳಗಿನ ರಹಸ್ಯ

ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಮಸೀದಿಯೇ 700 ವರ್ಷಗಳಷ್ಟು ಹಳೆಯದಾಗಿದ್ದರೆ, ಅದರಲ್ಲೇ ಇದ್ದ ದೇವಾಯ ಅದಕ್ಕಿಂತಲೂ ಹಳೆಯದು ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ತಾಂಬೂಲ ಪ್ರಶ್ನೆಯಲ್ಲೂ ಮಸೀದಿ ಈ ಹಿಂದೆ ದೇಗುಲ ಆಗಿತ್ತು ಎಂಬುವುದು ತಿಳಿದಿಬಂ‌ದಿತ್ತು.

- Advertisement -

Related news

error: Content is protected !!