- Advertisement -



- Advertisement -
ಪುತ್ತೂರು: ಸರಕಾರಿ ಪ್ರೌಢಶಾಲೆ ನಡ ಬೆಳ್ತಂಗಡಿ ಇಲ್ಲಿ ಜು25 ರಂದು ಪ್ರೀವಂತ ಕ್ರಿಯೇಟಿವ್ ಸೆಂಟರ್ ನಿರ್ಮಾಣದ “ವೀರರು ಅಮರರು “ಯೋಧರ ವಿಶೇಷ ಕಾರ್ಯಕ್ರಮ ಬಿಡುಗಡೆ ಸಮಾರಂಭ ನಡೆಯಿತು.

“ವೀರರು ಅಮರರು ” ಎನ್ನುವ ಯೋಧರ ವಿಶೇಷ ಕಾರ್ಯಕ್ರಮದ ಬಿಡುಗಡೆ ಸಮಾರಂಭವು ಸಂಸ್ಥೆಯ ಮುಖ್ಯೋಪಾಧ್ಯಾಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಭಾರತೀಯ ಸೇನೆ ಯ ನಿವೃತ್ತ ಯೋಧ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ರೋಹಿತಾಶ್ವ, ಶಿಕ್ಷಕ ಶಿವಪುತ್ರ ಸುಣಗಾರ,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸುಧಾಕರ್,ಪ್ರೀವಂತ ಕ್ರಿಯೇಟಿವ್ ಸೆಂಟರ್ ಮುಖ್ಯಸ್ಥ ಕುಮಾರೇಶ್ ಕಾಣಿಯೂರು ,ಪ್ರೀವಂತ ಬ್ರಾಂಡ್ ಪ್ರೋಮೊಟಿಂಗ್ ಕಿಡ್ ಮಾಡೆಲ್ ಪೋಷಕರಾಗಿರುವ ನಿಶ್ಮಿತಾ, ಉಪಸ್ಥಿತರಿದ್ದರು. ವೈಷ್ಣವಿ ಎಂ ಆರ್ ಪುತ್ತೂರು ಪ್ರಾರ್ಥಿಸಿ, ಅರ್ಚನಾ ಎಸ್ ಸಂಪ್ಯಾಡಿ ಸ್ವಾಗತಿಸಿದರು, ಧನ್ವಿ ರೈ ಪಾಣಾಜೆ ವಂದಿಸಿ ,ಶ್ರೀಶಾ ಯು ಕಿಲ್ಲೂರು ಕಾರ್ಯಕ್ರಮ ನಿರೂಪಿಸಿದರು.



- Advertisement -