Friday, April 26, 2024
spot_imgspot_img
spot_imgspot_img

ಭಯೋತ್ಪಾದಕರನ್ನು ಬೆಂಬಲಿಸುವ ದೇಶ ತಪ್ಪಿತಸ್ಥ ದೇಶ- ಮೋದಿ

- Advertisement -G L Acharya panikkar
- Advertisement -

ನವದೆಹಲಿ : ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಸಹಾಯ ಮಾಡುವ ದೇಶಗಳನ್ನು ತಪ್ಪಿತಸ್ಥರೆಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ  ಹೇಳಿದರು.

ಬ್ರಿಕ್ಸ್​ ಶೃಂಗಸಭೆಯಲ್ಲಿ ವರ್ಚುಯಲ್​ ಮೂಲಕ ಭಾಷಣ ಮಾಡಿದ ಪ್ರಧಾನಿ ಭಯೋತ್ಪಾದನೆಯೆಂಬ ಸಮಸ್ಯೆಯನ್ನು ಸಂಘಟಿತವಾಗಿ ನಿಭಾಯಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆಯೋಜಿಸಿದ್ದ 12ನೇ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​,ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಾಫೋಸಾ ಭಾಗಿಯಾಗಿದ್ದರು.

ಇದೇ ವೇಳೆ ಮೋದಿ ತಮ್ಮ ಸರ್ಕಾರದ ಆತ್ಮ ನಿರ್ಭರ್​ ಭಾರತ್​ ಅಭಿಯಾನವು ಸಮಗ್ರ ಸುಧಾರಣಾ ಪ್ರಕ್ರಿಯೆ ಹುಟ್ಟುಹಾಕಲಿದೆ ಎಂದು ಸರ್ಕಾರ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳನ್ನು ತಿಳಿಸಿದರು.

ಬ್ರೆಜಿಲ್​, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ಅಂತರರಾಷ್ಟ್ರೀಯ ವೇದಿಕೆ ಬ್ರಿಕ್ಸ್​ ಆಗಿದ್ದು, ಪ್ರತಿವರ್ಷ ಈ ವೇದಿಕೆ ಮೂಲಕ ಐದು ರಾಷ್ಟ್ರಗಳು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸುತ್ತವೆ. ಜುಲೈನಲ್ಲಿ ನಡೆಯಬೇಕಿದ್ದ ಈ ಶೃಂಗಸಭೆ ಕೋವಿಡ್​ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಇನ್ನು 2021ನೇ ಬ್ರಿಕ್ಸ್​ ಸಭೆಯ ಅತಿಥ್ಯವನ್ನು ಭಾರತ ನಿರ್ವಹಿಸಲಿದ್ದು, ಈ ಕುರಿತು ಮಾತನಾಡಿದ ಪ್ರಧಾನಿ, ಬ್ರಿಕ್ಸ್​ನ ಮೂರು ಸ್ತಂಭಗಳಲ್ಲಿ ಸಹಕಾರವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

- Advertisement -

Related news

error: Content is protected !!