Friday, April 19, 2024
spot_imgspot_img
spot_imgspot_img

ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ ಸಮಾವೇಶ.

- Advertisement -G L Acharya panikkar
- Advertisement -

ನವದೆಹಲಿ: ನವೆಂಬರ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷತೆಯಲ್ಲಿ ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ (ವಿಜಿಐಆರ್) ಸಮಾವೇಶ ನಡೆಯಲಿದೆ. ಈ ಸಮಾವೇಶವನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಆಯೋಜಿಸಿದೆ.

ಇದುಪ್ರಮುಖಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ಮುಖಂಡರು ಹಾಗೂ ಹಣಕಾಸು ಮಾರುಕಟ್ಟೆ ನಿಯಂತ್ರಕರು ಮತ್ತು ಭಾರತ ಸರ್ಕಾರದ ಉನ್ನತ ನಿರ್ಧಾರ ತೆಗೆದುಕೊಳ್ಳುವವರ ನಡುವಿನ ವಿಶೇಷ ಸಂವಾದವಾಗಲಿದೆ. 

ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ರಾಜ್ಯ ಸಚಿವರು, ಆರ್.ಬಿ.ಐ ಗೌವರ್ನರ್ ಹಾಗೂ ಉದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ, ನಂದನ್ ನಿಲೇಕಣಿ, ದೀಪಕ್ ಪಾರೇಖ್ ಮತ್ತು ಇತರೆ ಗಣ್ಯರು ಭಾಗಿಯಾಗಲಿದ್ದಾರೆ.

ದುಂಡು ಮೇಜಿನ ಸಭೆಯು ನಿರ್ವಹಣೆಯಡಿಯಲ್ಲಿ ಒಟ್ಟು ಸುಮಾರು 6 ಟ್ರಿಲಿಯನ್ ಅಮೆರಿಕನ್ ಡಾಲರ್‌ ಆಸ್ತಿ ಹೊಂದಿರುವ ಇಪ್ಪತ್ತು ಅತಿದೊಡ್ಡ ಪಿಂಚಣಿ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಅಮೆರಿಕ, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ.

ಈ ಹೂಡಿಕೆದಾರರಲ್ಲಿ ಕೆಲವರು ಇದೇ ಮೊದಲ ಬಾರಿಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜಾಗತಿಕ ಹೂಡಿಕೆದಾರರ ಹೊರತಾಗಿ, ದುಂಡು ಮೇಜಿನ ಸಭೆಯಲ್ಲಿ ಹಲವು ಭಾರತೀಯ ವಾಣಿಜ್ಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.

- Advertisement -

Related news

error: Content is protected !!