- Advertisement -
- Advertisement -


ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಆರಾಧ್ಯ ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿದ್ದು ಇದರಿಂದಾಗಿ ಬಹು ಸಂಖ್ಯಾತ ಹಿದೂಗಳ ಮನಸ್ಸಿಗೆ ಘಾಸಿ ಉಂಟಾಗಿದೆ. ಇಂತಹ ಸಂದೇಶಗಳು ಜಿಲ್ಲೆಯ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಾಗಿದ್ದು, ಈ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಇನ್ನು ಮುಂದಕ್ಕೆ ಇಂತಹ ಅಶ್ಲೀಲ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಮರುಕಳಿಸದಂತೆ ಪೊಲೀಸ್ ಠಾಣೆ ವಿಟ್ಲ ಇದರ ವೃತ್ತನಿರೀಕ್ಷಕರಿಗೆ ದೂರನ್ನು ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ವತಿಯಿಂದ ಸಲ್ಲಿಸಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಪ್ರಖಂಡದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ, ಸಂಚಾಲಕ ಚರಣ್ ಕಾಪುಮಜಲು, ಗೋರಕ್ಷಕ್ ನಾಗೇಶ್ ಹಾಗೂ ಘಟಕ ಪ್ರಮುಖರು ಉಪಸ್ಥಿತರಿದ್ದರು.



- Advertisement -