Sunday, May 5, 2024
spot_imgspot_img
spot_imgspot_img

ಬಂಟ್ವಾಳ: ಡಿ. 9,10 ಬಿ.ಸಿ.ರೋಡ್ ನಲ್ಲಿ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರ

- Advertisement -G L Acharya panikkar
- Advertisement -

ಬಂಟ್ವಾಳ: ನೂರಾರು ಅಶಕ್ತರ ಭವಿಷ್ಯದ ಜೀವನಕ್ಕೆ ಬೆಳಕು ನೀಡಲಿದೆ ಬಂಟ್ವಾಳದ ಜಮೀಯ್ಯತುಲ್ ಫಲಾಹ್ ಸಂಸ್ಥೆ

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಕೈ ಕಾಲುಗಳಿಲ್ಲದ ಬಡ ಅಶಕ್ತರಿಗೆ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರವು ಡಿಸೆಂಬರ್ 9 ಮತ್ತು 10 ರಂದು ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಿಬಿರಕ್ಕೆ ಸಹಯೋಗ ನೀಡಲಿದೆ.

ಇದೀಗಾಗಲೇ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಪರಿಶೀಲನೆ ಮಾಡಿರುವ ನೂರಕ್ಕೂ ಅಧಿಕ ವಿಕಲಚೇತನ ಫಲಾನುಭವಿಗಳು ಶಿಬಿರದ ನೋಂದಾವಣೆ ಮಾಡಿದ್ದು, ಎರಡು ದಿನಗಳ ಶಿಬಿರದಲ್ಲಿ ಅವರು ಕೃತಕ ಅವಯವಗಳನ್ನು ಪಡೆಯಲಿದ್ದಾರೆ. ಅಪಘಾತದಿಂದ ಮತ್ತು ಜನಿಸುವಾಗಲೇ ಹಾಗೂ ಸಕ್ಕರೆ ಕಾಯಿಲೆ ಗ್ಯಾಂಗ್ರಿನ್ ನಂತಹ ವಿವಿಧ ಕಾಯಿಲೆಗಳಿಂದ ಅಂಗಾಂಗಗಳನ್ನು ಕಳಕೊಂಡ ಬಡವರಿಗೆ ಶಿಬಿರದಲ್ಲಿ ಅಳತೆ ತೆಗೆದು ಅದೇ ದಿನ ಜೈಪುರ್ ಬ್ರಾಂಡಿನ ಕೃತಕ ಅವಯವಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ರಶೀದ್ ವಿಟ್ಲ ತಿಳಿಸಿದ್ದಾರೆ.

- Advertisement -

Related news

error: Content is protected !!