Tuesday, April 23, 2024
spot_imgspot_img
spot_imgspot_img

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟರೆ ಹೋರಾಟ-ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ.

- Advertisement -G L Acharya panikkar
- Advertisement -

ಮಂಗಳೂರು: ಬೆಂಗಳೂರು ಗಲಭೆಯಲ್ಲಿ ಮೃತಪಟ್ಟ ಮೂವರಿಗೆ ಪರಿಹಾರ ನೀಡಲು ಎಸ್​ಡಿಪಿಐ ಆಗ್ರಹಿಸಿದೆ. ಆದರೆ ಅವರಿಗೆ ಪರಿಹಾರ ಕೊಟ್ಟರೆ ವಿಶ್ವ ಹಿಂದೂ ಪರಿಷತ್​ ಉಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮಂಗಳೂರು ವಿಭಾಗದ ಮುಖಂಡ ಶರಣ್ ಪಂಪ್​ವೆಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಮಂಗಳೂರು ಗಲಭೆ, ಪಾದಾರಾಯನಪುರ ಗಲಭೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬೆಂಗಳೂರು ಗಲಭೆ ನಡೆದಿದೆ. ಇದರ ಹಿಂದೆ ಕೈವಾಡ ಇರುವ ಎಸ್​ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.ಗುಪ್ತಚರ ಇಲಾಖೆ ಮೂರು ದಿನಗಳ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳದೇ ಈ ರೀತಿ ಆಗಿದೆ ಎಂದು ಆಪಾದಿಸಿದ ಅವರು ಘಟನೆಯ ತನಿಖೆಯನ್ನು ಎನ್​ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟರೆ ಹೋರಾಟ-ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ.

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟ ಮೂವರಿಗೆ ಪರಿಹಾರ ನೀಡಲು ಎಸ್​ಡಿಪಿಐ ಆಗ್ರಹಿಸಿದೆ. ಆದರೆ ಅವರಿಗೆ ಪರಿಹಾರ ಕೊಟ್ಟರೆ ವಿಶ್ವ ಹಿಂದೂ ಪರಿಷತ್​ ಉಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮಂಗಳೂರು ವಿಭಾಗದ ಮುಖಂಡ ಶರಣ್ ಪಂಪ್​ವೆಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Posted by VTV on Thursday, 13 August 2020

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಹಿಂಪ ರಾಜ್ಯ ಮುಖಂಡ ಎಂ.ಬಿ ಪುರಾಣಿಕ್ ಅವರು ಬೆಂಗಳೂರು ಘಟನೆಯ ಹಿಂದೆ ಇರುವ ಎಸ್​ಡಿಪಿಐ, ಪಿಎಫ್ ಸಂಘಟನೆಗಳನ್ನ ತಕ್ಷಣ ನಿಷೇಧಿಸಬೇಕು ಮತ್ತು ಇದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

- Advertisement -

Related news

error: Content is protected !!