Friday, March 29, 2024
spot_imgspot_img
spot_imgspot_img

23ನೇ ವಯಸ್ಸಿನಲ್ಲಿ 300 ಮಹಿಳೆಯರಿಗೆ ವಂಚಿಸಿದ ರಸಿಕ ರಾಜ!

- Advertisement -G L Acharya panikkar
- Advertisement -

ವಿಜಯವಾಡ: ಒಂದಲ್ಲ ಎರಡಲ್ಲ ಬರೋಬ್ಬರಿ 200 ಯುವತಿಯರು ಹಾಗೂ 100 ವಿವಾಹಿತ ಮಹಿಳೆಯರಿಗೆ ವಂಚಿಸಿದ ರಸಿಕರಾಜನನ್ನು ಬಂಧಿಸಿದ ಘಟನೆ ವಿಜಯವಾಡದಲ್ಲಿ ನಡೆದಿದೆ

ಚೆನ್ನುಪಲ್ಲಿ ಪ್ರಸನ್ನಕುಮಾರ್​ ಅಲಿಯಾಸ್​ ಪ್ರಶಾಂತಿ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಅಲಿಯಾಸ್​ ಟೋನಿ (23) ಪ್ರಕರಣದ ಆರೋಪಿಯಾಗಿದ್ದಾನೆ. ಈ ಖತರ್ನಾಕ್​ ಯುವಕ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದತುರ್​ ಗೀತಾಶ್ರಮ್ ಸ್ಟ್ರೀಟ್ ಮೂಲದವನಾಗಿದ್ದಾನೆ​.

ಆರೋಪಿ ಪ್ರಸನ್ನಗೆ 2020ರಲ್ಲಿ ಶೇರ್​ಚಾಟ್​ ಮೂಲಕ ನಬಿಕೊಟಾ ಎಂಬ ವ್ಯಕ್ತಿಯಿಂದ ಶ್ರೀನಿವಾಸ್ ಎಂಬಾತನ ಪರಿಚಯವಾಗುತ್ತದೆ. ಶ್ರೀನಿವಾಸ್​ಗೆ ಪ್ರಶಾಂತ್​ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಎಂಬ ಹೆಸರಿನಿಂದ ಆರೋಪಿ ಪ್ರಸನ್ನ ಪರಿಚಿತನಾಗುತ್ತಾನೆ.

ಹೈದರಬಾದ್​ನ ಸೆಕ್ರೆಟರಿಯಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ತನಗೆ ಅನೇಕ ಗಣ್ಯರ ಪರಿಚಯ ಇರುವುದಾಗಿ ಹೇಳಿಕೊಳ್ಳುತ್ತಾನೆ. ಸೆಕ್ರೆಟರಿಯಟ್​ನಲ್ಲಿ ಕ್ಲರ್ಕ್​ ಹುದ್ದೆ ಕೊಡಿಸುವುದಾಗಿ ನಂಬಿಸುತ್ತಾನೆ. ಇದರ ನಡುವೆ ನನ್ನ ತಾಯಿ ಆರೋಗ್ಯ ಸರಿಯಿಲ್ಲ. ಚಿಕಿತ್ಸೆಗೆ ಹಣ ಬೇಕಿದೆ ಎಂದು ಶ್ರೀನಿವಾಸ್​ ಬಳಿ ಕೇಳುತ್ತಾನೆ.

ಕೆಲಸದ ಬಗ್ಗೆ ಶ್ರೀನಿವಾಸ್​ ತಾಯಿಯ ಬಳಿ ಹೇಳಿದಾಗ. ಹೇಗಿದ್ರೂ ಮಗನಿಗೆ ಕೆಲಸ ಸಿಗುತ್ತದೆ ಎಂದು ನಂಬಿದ್ದ ಶ್ರೀನಿವಾಸ್​ ತಾಯಿ ತನ್ನ ಬಳಿಯಿದ್ದ ಚಿನ್ನದ ಸರ ಮತ್ತು ತಾಳಿಯನ್ನು ಮಾರಿ ಹಣ ಕೊಡುತ್ತಾಳೆ. ಹಣವನ್ನು ಸ್ವೀಕರಿಸುವ ಪ್ರಸನ್ನ ಅಂದಿನಿಂದ ಯಾವುದೇ ಕರೆಯನ್ನು ಸ್ವೀಕರಿಸುವುದೇ ಇಲ್ಲ.

ಇದರ ನಡುವೆ ಜುಲೈ 29ರಂದು ಕಡಪ ಜಿಲ್ಲೆಯ ಅಕ್ಕಯಪಲ್ಲೆಯಲ್ಲಿರುವ ಮನೆಯೊಳಗೆ ನುಗ್ಗಿ, ಲಾಕರ್​ ಹೊಡೆದು ಅದರಲ್ಲಿದ್ದ 30 ಗ್ರಾಂ ಚಿನ್ನದ ಗ್ಲಾಸಸ್​, ಕಿವಿಯೋಲೆಗಳು, ಎರಡು ಉಂಗುರಗಳನ್ನು ಪ್ರಸನ್ನ ಕಳ್ಳತನ ಮಾಡಿರುತ್ತಾನೆ. ಇದೇ ವೇಳೆ ತಾವು ಮೋಸ ಹೋಗಿರುವುದು ಶ್ರೀನಿವಾಸ್​ಗೆ ತಿಳಿದು ತಡಮಾಡದೇ ದೂರು ನೀಡುತ್ತಾರೆ.

ಪ್ರಸನ್ನ ಕುಮಾರ್​ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪೊಲೀಸರಿಗೆ ಆತನ ಸ್ಮಾರ್ಟ್​ಫೋನ್​ ನೋಡಿ ಶಾಕ್​ ಆಗುತ್ತದೆ. ಬಿ.ಟೆಕ್​ ಅರ್ಧಕ್ಕೆ ಮೊಟಕುಗೊಳಿರುವ ಪ್ರಸನ್ನ ಇನ್​ಸ್ಟಾಗ್ರಾಂ, ಫೇಸ್​ಬುಕ್​ ಮತ್ತು ಶೇರ್​ಚಾಟ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬರುತ್ತದೆ. ವಿವಾಹಿತ ಮಹಿಳೆಯರು ಮತ್ತು ಯುವತಿಯರನ್ನು ಮರುಳು ಮಾಡಿ ಪ್ರೀತಿಯ ಬಲೆಗೆ ಬೀಳಿಸಿ ವಂಚಿಸುತ್ತಿದ್ದ.

ಅಲ್ಲದೆ ಮಹಿಳೆಯರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದನು. ಎಲ್ಲ ಚಿತ್ರಗಳನ್ನು ಸೇವ್​ ಮಾಡಿಟ್ಟುಕೊಂಡಿದ್ದ ಆರೋಪಿ ಮಹಿಳೆಯರನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದಾನೆ. ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಚಿನ್ನಾಭರಣವನ್ನು ಸುಲಿಗೆ ಮಾಡಿ, ಮಾರಾಟ ಮಾಡಿದ ಹಣ ಪಡೆದುಕೊಂಡಿದ್ದಾನೆ. ಅನೇಕರು ಮರ್ಯಾದೆಗೆ ಅಂಜಿ ಆತನ ವಿರುದ್ಧ ದೂರು ನೀಡಲು ಯಾರೂ ಮುಂದೆ ಬಂದಿಲ್ಲ.

ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದ ಶ್ರೀನಿವಾಸ್​ಗೆ ವಂಚನೆ ಮಾಡಿದ​ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಸನ್ನ ಪೊಲೀಸ್​ ವಿಚಾರಣೆಯಲ್ಲಿ ಸುಮಾರು 100 ಮಹಿಳೆಯರು ಮತ್ತು 200 ಯುವತಿಯರಿಗೆ ಪ್ರಸನ್ನ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನಿಂದ 1.26 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

Related news

error: Content is protected !!