Saturday, June 29, 2024
spot_imgspot_img
spot_imgspot_img

ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಾಲಕಿ ಮೇಲೆ ಅತ್ಯಾಚಾರ!

- Advertisement -G L Acharya panikkar
- Advertisement -

ವಿಜಯವಾಡ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನವಾಗಿದ್ದು, ಪ್ರಕರಣ ಕುರಿತ ಸಮಗ್ರ ಮಾಹಿತಿಯನ್ನು ವಿಶಾಖಪಟ್ಟಣಂ ನಗರದ ಸಹಾಯಕ ಪೊಲೀಸ್​ ಆಯುಕ್ತರಾದ ಪ್ರೇಮ್​ ಕಾಜಲ್​ ಮಾಧ್ಯಮಗಳ ಮುಂದೆ ವಿವರಿಸಿದರು.


ಟಿಕ್​ಟಾಕ್ (ಪ್ರಸ್ತುತ ಭಾರತದಲ್ಲಿ ಬ್ಯಾನ್​ ಆಗಿದೆ) ಮೂಲಕ ಬಾಲಕಿಯನ್ನು ಪರಿಚಯಿಸಿಕೊಂ​ಡ ಆರೋಪಿ ಭಾರ್ಗವ, ಟಿಕ್​ಟಾಕ್​ನಲ್ಲಿ ನಾನೊರ್ವ ಬಿಗ್​ ಸ್ಟಾರ್​ ಬೇರೆ ಮಾಧ್ಯಮಗಳಲ್ಲಿ ಅವಕಾಶ ಕೊಡಿಸುತ್ತೇನೆಂದು ಪುಸಲಾಯಿಸಿದ್ದ. ಹೀಗೆ ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಚಾಟಿಂಗ್​ ಮಾಡುತ್ತಿದ್ದ. ಅಲ್ಲದೆ, ಆಗಾಗಾ ಭೇಟಿ ಸಹ ಮಾಡುತ್ತಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಮೇಲೆ ಪ್ರೇಮ ನಿವೇದನೆ ಮಾಡಿದ್ದ. ಅಲ್ಲದೆ, ಇಬ್ಬರ ಜತೆಗೂಡಿ ವಿಡಿಯೋ ಮಾಡಲು ಮೊದಲೇ ಪ್ರಸ್ತಾಪ ಮಾಡಿದ್ದ ಎಂದು ಎಸಿಪಿ ಹೇಳಿದರು. ಆದರೆ, 14ನೇ ವಯಸ್ಸಿನಲ್ಲೇ ಸ್ಟಾರ್​ ಆಗುವ ಆಸೆ ಬಾಲಕಿಗೆ ಬಂದಿದ್ದು ನಿಜಕ್ಕೂ ದುರ್ದೈವವೇ ಸರಿ.


ವಿಡಿಯೋ ಮಾಡಲು ಬಾಲಕಿ ಬಟ್ಟೆ ಬದಲಾಯಿಸುವಾಗ ಭಾರ್ಗವ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದ ಎನ್ನಲಾಗಿದೆ. ತನ್ನ ಬಳಿ ಅಶ್ಲೀಲ ಫೋಟೋ-ವಿಡಿಯೋ ಇರುವುದಾಗಿ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಆಕೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದಾಗಿ ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಭಾರ್ಗವನ ಫೋನ್​ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅಪ್ರಾಪ್ತೆಯೊಂದಿಗೆ ಸಾಮಾಜಿಕ ಜಾಲತಾಣ ಅಥವಾ ಇತರೆ ಆಯಪ್​ ಮೂಲಕ ಪ್ರೇಮ ಸಂಬಂಧ ಅಪರಾಧ ಎಂದಿರುವ ಎಸಿಪಿ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯ ಫೋಟೋ ಅಥವಾ ಹೆಸರನ್ನಾಗಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಭಾರ್ಗವನ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತಷ್ಟು ಹುಡುಗಿಯರು ಈತನಿಂದ ಮೋಸ ಹೋಗಿರಬಹುದಾ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

ವಿಜಯನಗರಂ ಜಿಲ್ಲೆಯ ಕೊಟ್ಟವಲಸಾ ಏರಿಯಾದ ನಿವಾಸಿ ಆಗಿರುವ ಭಾರ್ಗವ ಟಿಕ್​ಟಾಕ್​ ವಿಡಿಯೋಗಳಿಂದ ತುಂಬಾ ಫೇಮಸ್​ ಆಗಿದ್ದಾನೆ. ಒಮ್ಮೆ ಚಾಟಿಂಗ್​ ಮೂಲಕ ವಿಶಾಖಪಟ್ಟಣಂ ಜಿಲ್ಲೆಯ ಸಿನ್ಹಗಿರಿ ಕಾಲನಿಯ 14 ವರ್ಷದ ಬಾಲಕಿಯ ಪರಿಚಯವಾಗಿದೆ. ಸಿನ್ಹಗಿರಿ ಕಾಲನಿ ವಿಜಯನಗರಂ ಮತ್ತು ವಿಶಾಖಪಟ್ಟಣಂ ಗಡಿಭಾಗದಲ್ಲಿದೆ. ಚಾಟಿಂಗ್​ನಿಂದ ಆರಂಭವಾದ ಪರಿಚಯ ತುಂಬಾ ಸಲುಗೆಗೆ ತಿರುಗಿತ್ತು.

ತನ್ನ ಜತೆಗಿರುವ ಅಪ್ರಾಪ್ತೆಯನ್ನು ಭಾರ್ಗವ ಅನನ್ಯ ಎಂದು ಪರಿಚಯಿಸಿದ್ದ. ಇಬ್ಬರ ನಡುವಿನ ಸಲುಗೆ ನಿರಂತರವಾಗಿ ಚಾಟ್​ ಮಾಡುವುದು ಮತ್ತು ಪದೇಪದೆ ಭೇಟಿಯಾಗುವುದು ಮಾಡುತ್ತಿದ್ದರು. ಭಾರ್ಗವ್​, ಟಿಕ್​ಟಾಕ್​ ವಿಡಿಯೋ ಹೆಸರಲ್ಲಿ ಅಪ್ರಾಪ್ತೆಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹೀಗಿರುವಾಗ ಒಮ್ಮೆ ಅಪ್ರಾಪ್ತೆಯ ದೇಹದಲ್ಲಾದ ಬದಲಾವಣೆಯನ್ನು ನೋಡಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಆಕೆ ಅಷ್ಟರಲ್ಲಾಗಲೇ ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಪ್ರಾಪ್ತೆಯ ತಾಯಿ ಇದೇ ತಿಂಗಳ 16ರಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು ಮಗಳ ಸ್ಥಿತಿಗೆ ಫನ್​ ಬಕೆಟ್​ ಭಾರ್ಗವ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಶಾಖಪಟ್ಟಣಂ ನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭಾರ್ಗವ್​ನನ್ನು ಬಂಧಿಸಲಾಗಿದೆ. ಆತನು ಸಹ ಅಪ್ರಾಪ್ತೆಯನ್ನು ತಂಗಿಯ ಹೆಸರಲ್ಲಿ ಅಧೀನದಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಭಾರ್ಗವ ಬಂಧನಕ್ಕೂ ಮುಂಚೆ ಆತ ಕೆಲವೊಂದು ಅವಕಾಶದ ಮೇಲೆ ಹೈದರಾಬಾದ್​ಗೆ ಹೋಗಿದ್ದ. ಆಡಿಯೋ ಕಾರ್ಯಕ್ರಮವೊಂದರಲ್ಲಿ ಭಾರ್ಗವ ಸ್ಕಿಟ್ಸ್​ ಸಹ ಮಾಡಿದ್ದ. ಟಿಕ್​ಟಾಕ್​ ಮಾತ್ರವಲ್ಲದೆ, ಇತರೆ ಆ್ಯಪ್​ ಗಳಲ್ಲಿಯೂ ಭಾರ್ಗವ ವಿಡಿಯೋ ಮಾಡಿದ್ದ. ಸಂತ್ರಸ್ತೆಯ ತಾಯಿ ದೂರು ನೀಡಿದ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದ್ದು, ದಿಶಾ ಪೊಲೀಸರು ಭಾರ್ಗವ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಬಂಧಿಸಲಾಗಿದ್ದು, ಈ ಪ್ರಕರಣ ಇದೀಗ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. 

- Advertisement -

Related news

error: Content is protected !!