ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಉತ್ತರ ಪ್ರದೇಶದ ಎಂಟು ಪೊಲೀಸರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿಕಾಸ್ ಸಹಚರರನ್ನು ಬಂಧಿಸಿದ ಬೆನ್ನಲ್ಲೇ ಉಜ್ಜಯಿನಿಯಲ್ಲಿ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ರೆಡಿಯಾಗಿದ್ದರು. ವಿಕಾಸ್ ಅವಿತಿದ್ದ ಮನೆಮೇಲೆ ಪೊಲೀಸರು ತಲುಪುತ್ತಿದ್ದಂತೆ ಟೆರೇಸ್ ಮೇಲಿಂದ 8-10 ಮಂದಿ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಿಂದ ಶಿವರಾಜ್ ಪುರ ಠಾಣಾಧಿಕಾರಿ ಮಹೇಶ್ ಯಾದವ್, ಸಬ್ ಇನ್ಸ್ ಪೆಕ್ಟರ್ , 5 ಕಾನ್ಸ್ ಟೇಬರ್ ಸೇರಿ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದರು. ಬುಧವಾರ ಈತ ಹರ್ಯಾಣದಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಈತನ ಸಹಚರರಾಧ ಅಮರ್, ಪ್ರಭಾತ್,ರಣಬೀರ್ ನನ್ನು ಖಾಕಿಪಡೆ ಎನ್ ಕೌಂಟರ್ ಮಾಡಿತ್ತು. ಇದರ ಬೆನ್ನಲ್ಲೇ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.ಇನ್ನು ಈ ಪ್ರಮುಖ ಆರೋಪಿ ವಿಕಾಸ್ ದುಬೆ ವಿರುದ್ಧ ಸುಮಾರು 60ಕ್ಕೂ ಅಧಿಕ ಪ್ರಕರಣಗಳಿವೆ. ಯುಪಿಯಲ್ಲಿ ರಾಜನಾಥ್ ಸಿಂಗ್ ಅವರ ಸರ್ಕಾರವಿದ್ದಾಗ ಆಗಿನ ಮಂತ್ರಿಯಾಗಿದ್ದ ಸಂತೋಷ್ ಶುಕ್ಲಾ ಹತ್ಯೆ ಕೇಸ್ ನಲ್ಲೂ ಈತ ಭಾಗಿಯಾಗಿದ್ದ.