Saturday, April 27, 2024
spot_imgspot_img
spot_imgspot_img

ಗ್ರಾಮ ಪಂಚಾಯತ್ ಚುನಾವಣೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮತ ಎಣಿಕೆ ಆರಂಭ!

- Advertisement -G L Acharya panikkar
- Advertisement -

ಮಂಗಳೂರು / ಉಡುಪಿ: ಕೊರೊನಾ ಸಾಂಕ್ರಾಮಿಕದ ಮಧ್ಯೆ, ಎರಡು ಹಂತಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆದ 5,728 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಡಿಸೆಂಬರ್ 30 ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.

ಮಂಗಳೂರಿನಲ್ಲಿ ಬೋದೆಲ್‌ನ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯು ಪ್ರಾರಂಭವಾದರೆ, ಉಡುಪಿಯಲ್ಲಿ ಸೇಂಟ್ ಸೆಸಿಲಿಯ ಸಂಸ್ಥೆ ಬ್ರಹ್ಮಗಿರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.ಕರ್ನಾಟಕದ ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು ಉಳಿದ 3,11,887 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 43,238 ಮತ್ತು ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು. ಡಿ.22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 82.04 ರಷ್ಟು ಮತ್ತು ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 80.71 ರಷ್ಟು ಮತದಾನವಾಗಿತ್ತು.

ಫಲಿತಾಂಶಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ – karsec.gov.in ಮತ್ತು ceokarnataka.kar.nic.in ನಲ್ಲಿ ನೋಡಬಹುದಾಗಿದೆ.

ರಾಜ್ಯದಲ್ಲಿ 6,004 ಗ್ರಾಮ ಪಂಚಾಯಿತಿಗಳಿದ್ದರೂ 5,762 ಕ್ಕೆ ಮಾತ್ರ ಚುನಾವಣೆ ನಡೆದಿದೆ. ವಿವಿಧ ಕಾನೂನು ಸಮಸ್ಯೆಗಳಿಂದಾಗಿ ಇತರ 242 ಪಂಚಾಯಿತಿಗಳ ಚುನಾವಣೆಯನ್ನು ಘೋಷಿಸಿಲ್ಲ.

- Advertisement -

Related news

error: Content is protected !!