Saturday, May 11, 2024
spot_imgspot_img
spot_imgspot_img

ವಿಘ್ನೇಶ್ ಆತ್ಮಹತ್ಯೆ ಪ್ರಕರಣ- ಉನ್ನತ ಮಟ್ಟದ ತನಿಖೆಗೆ ಮಿಥುನ್ ರೈ ಆಗ್ರಹ

- Advertisement -G L Acharya panikkar
- Advertisement -

ಮಂಗಳೂರು: ನಿನ್ನೆ ನಡೆದ ವಿಘ್ನೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಜನರಲ್ಲಿ ಗೊಂದಲವಿದ್ದು ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ ಎಂದು ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಘ್ನೇಶ್ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಸಂಸ್ಥೆಯ ಉದ್ಯೋಗಿಯಾಗಿದ್ದು ವಿನಾಯಕ ಬಾಳಿಗಾ ಹತ್ಯೆ ಪ್ರಕರಣದಲ್ಲೂ ವಿಘ್ನೇಶ್ ನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಅಲ್ಲದೆ ಹತ್ಯೆ ಗೆ ಬಳಸಿರುವ ಕ್ವಾಲಿಸ್ ಕಾರು ವಿಘ್ನೇಶ್ ಹೆಸರಲ್ಲಿ ನೋಂದಣಿಯಾಗಿತ್ತು ಎಂದು ಮಿಥುನ್ ರೈ ಹೇಳಿದ್ದಾರೆ.

ಈ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತ್ಮಹತ್ಯೆ ಗೂ ನರೇಶ್ ಶೆಣೈ ಗೂ ಸಂಬಂಧ ಇದೆಯಾ ಎಂದು ತನಿಖೆ ನಡೆಯಬೇಕಿದೆ ಎಂದು ಮಿಥುನ್ ರೈ ಆಗ್ರಹಿಸಿದ್ದಾರೆ. ವಿನಾಯಕ ಬಾಳಿಗಾ ಸಹೋದರಿಯರು ಸಹಿತ ಇತರ ಸಾಕ್ಷಿಗಳಿಗೂ ರಕ್ಷಣೆ ಒದಗಿಸಬೇಕಾದ ಅಗತ್ಯವಿದೆ ಎಂದು ಮಿಥುನ್ ರೈ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!