Monday, June 22, 2026
spot_imgspot_img
spot_imgspot_img

ವಿರಾಜಪೇಟೆ: ಉದ್ಯಮಿ ಮನೆಗೆ ನುಗ್ಗಿ ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ!

- Advertisement -
- Advertisement -

ವಿರಾಜಪೇಟೆ: ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ಜೂನ್ 19ರ ತಡರಾತ್ರಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕೋವಿಯಿಂದ ಗುಂಡು ಹಾರಿಸಿ ಹತ್ಯೆಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 3 ಜನರನ್ನು ವಿರಾಜಪೇಟೆ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆ.ಕೆ ಗ್ರೂಪ್ ಮಾಲೀಕ ಕಾಳಮಂಡ ಜಗತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಜಗತ್ ಅವರು ದೂರುದಾರ ನೀಡಿದ ದೂರಿನ ಪ್ರಕಾರ, ವಿರಾಜಪೇಟೆ ಹೊರವಲಯದ ವ್ಯಕ್ತಿಗಳು ಕೋವಿಯೊಂದಿಗೆ ಮನೆಗೆ ನುಗ್ಗಿ ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಉದ್ಯಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ನಗರ ನಿಸರ್ಗ ಬಡಾವಣೆಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!