Monday, July 7, 2025
spot_imgspot_img
spot_imgspot_img

ವಿವಾದಕ್ಕೆ ಕಾರಣವಾದ ವೈದ್ಯಕೀಯ ವಿದ್ಯಾರ್ಥಿಗಳ ಡಾನ್ಸ್ ವೀಡಿಯೋ

- Advertisement -
- Advertisement -

ತ್ರಿಶೂರ್: ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಇದರಲ್ಲಿ ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು.

ಈ ವಿಡಿಯೋದಲ್ಲಿ ನವೀನ್ ಕೆ. ರಜಾಕ್ ಹಾಗೂ ಜಾನಕಿ ಓಂಕುಮಾರ್ ಎಂಬವರು ಭರ್ಜರಿ ಹೆಜ್ಜೆ ಹಾಕಿದ್ದರು. ಕಾಲೇಜು ಕಾರಿಡಾರಿನಲ್ಲಿ ನೃತ್ಯ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು.

ಮೊದ ಮೊದಲು ಇವರಿಬ್ಬರ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. ಆದರೆ ಈಗ ಇದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ನೃತ್ಯ ಮಾಡಿದ ಯುವಕನ ಹೆಸರು ನವೀನ್ ಕೆ. ರಜಾಕ್ ಆಗಿದ್ದರಿಂದ ಇದು ಕೆಲವರ ಕೋಪಕೆ ಕಾರಣವಾಗಿದೆ.

ಇದೇ ರೀತಿಯ ಸಾಕಷ್ಟು ಕಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಿ ಹೋಗಿದೆ. ಇಲ್ಲಿ ನೃತ್ಯ ಮಾಡಿದವರ ಹೆಸರು ಜಾನಕಿ ಓಂಕುಮಾರ್ ಹಾಗೂ ನವೀನ್ ಕೆ. ರಜಾಕ್. ನನಗೆ ಇಲ್ಲೇನೋ ಸಂಶಯಾಸ್ಪದ ಸಂಗತಿ ಎಂದೆನಿಸುತ್ತಿದೆ. ಜಾನಕಿ ಪೋಷಕರು ಆದಷ್ಟು ಎಚ್ಚರದಿಂದ ಇರೋದು ಉತ್ತಮ ಎಂದು ವಕೀಲ ಕೃಷ್ಣ ರಾಜ್ ಬರೆದಿದ್ದಾರೆ.

- Advertisement -

Related news

error: Content is protected !!