Tuesday, April 30, 2024
spot_imgspot_img
spot_imgspot_img

ವಿಶ್ವ ಹಿಂದೂ ಪರಿಷದ್, ಬಜರಂಗದಳ ಚಿಕ್ಕಮಗಳೂರು ಶ್ರೀ ದತ್ತಜಯಂತಿ ಉತ್ಸವ – 2023 ಶ್ರೀ ದತ್ತಮಾಲಾ ಅಭಿಯಾನ

- Advertisement -G L Acharya panikkar
- Advertisement -

ವಿಶ್ವ ಹಿಂದೂ ಪರಿಷದ್, ಬಜರಂಗದಳ ಚಿಕ್ಕಮಗಳೂರು ಇದರ ಪ್ರಾಯೋಜಕತ್ವದಲ್ಲಿ ಶ್ರೀ ದತ್ತಜಯಂತಿ ಉತ್ಸವ – 2023 ಶ್ರೀ ದತ್ತಮಾಲಾ ಅಭಿಯಾನ ಡಿಸೆಂಬರ್ 17 ರಿಂದ ಡಿಸೆಂಬರ್ 26 ರ ವರೆಗೆ ನಡೆಯಲಿರುವುದು.

ಡಿಸೆಂಬರ್ 24 ರಂದು ದತ್ತಪೀಠದಲ್ಲಿ ಶ್ರೀ ಅನಸೂಯಾ ದೇವಿ ಪೂಜೆ, ಗಣಪತಿ ಪೂಜೆ, ಪುಣ್ಯಾಹವಾಚನ, ಪಂಚಗವ್ಯ ಶುದ್ದಿ, ಋತ್ವಿಗ್ವರ್ಣ, ಗಣಪತಿ ಹೋಮ, ದುರ್ಗಾ ಹೋಮ, ಕಲಾಶಾಭೀಷೇಕ ಹಾಗೂ ಮಹಾಪೂಜೆ ನಡೆಯಲಿರುವುದು.

ಸಂಜೆ – ಪಾದುಕಾ ಶುದ್ದಿ, ಪ್ರಾಕಾರ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಲಿರುವುದು.

ದಿನಾಂಕ : 25-12-20323 ಸೋಮವಾರ ದತ್ತ ಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾ ಹೋಮ, ರುದ್ರಹೋಮ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ.

ಮಧ್ಯಾಹ್ನ ೨.೩೦ ಗಂಟೆಗೆ ಚಿಕ್ಕಮಗಳೂರು ನಗರದ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಪಾರ್ಕ್‌‌ವರೆಗೆ ಬೃಹತ್‌ ಶೋಭಯಾತ್ರೆ ನಡೆಯಲಿದೆ. ಬಳಿಕ ನಂತರ ಸಂಜೆ ೬.೦೦ ಗಂಟೆಗೆ ಆಜಾದ್ ಪಾರ್ಕ್‌ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಶ್ರೀ ಕಾಂತ್ ಪೈ ಅಧ್ಯಕ್ಷರು, ವಿ.ಹಿಂ.ಪ., ಚಿಕ್ಕಮಗಳೂರು ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಶಂಕರ್ ಗಾಯ್ಕರ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ, ವಿ.ಹಿಂ.ಪ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಜಗನಾಥ ಶಾಸ್ತ್ರಿ ಕಾರ್ಯದರ್ಶಿ, ವಿ.ಹಿಂ.ಪ., ದಕ್ಷಿಣ ಕರ್ನಾಟಕ, ಸುನಿಲ್ ಕೆ.ಆರ್ ಪ್ರಾಂತ ಸಂಯೋಜಕ, ಬಜರಂಗದಳ, ದಕ್ಷಿಣ ಕರ್ನಾಟಕ ಭಾಗವಹಿಸಲಿದ್ದಾರೆ.

ಪರಮಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿಗಳ ತೊಂಠದಾರ್ಯ ಸಂಸ್ಥಾನ ಮಠ, ಬಸವಪಟ್ಟಣ, ಅರಕಲಗೂಡು.
ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶಂಕರದೇವರ ಮಠ, ಚಿಕ್ಕಮಗಳೂರು. ಪರಮಪೂಜ್ಯ ಶ್ರೀ ಡಾ|| ಮರುಳುಸಿದ್ದೇಶ್ವರ ಸ್ವಾಮೀಜಿ ಬಸವತತ್ವ ಪೀಠ, ಚಿಕ್ಕಮಗಳೂರು ಇವರ ದಿವ್ಯ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

೨೬-೧೨-೨೦೨೩ನೇ ಮಂಗಳವಾರ ದತ್ತ ಪೀಠದಲ್ಲಿ ದಶಸಹಸ್ರ ಸಂಖ್ಯೆಯಲ್ಲಿ ಶ್ರೀ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭಿಶೇಕ, ಮಹಾಪೂಜೆ, ತಂತ್ರಿಗಳಿಂದ ಅಶೀರ್ವಚನ, ಬ್ರಹ್ಮ ಭೋಜನ, ಪ್ರಸಾದ ವಿನಿಯೋಗ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಹಿಂದೂ ಭಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಚಿಕ್ಕಮಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!