- Advertisement -
- Advertisement -



ಪೆರ್ಡೂರು: ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷೇತ್ರ ದರ್ಶನ ಮಾಡಿದರು.
ಈ ವೇಳೆ ಶ್ರೀಗಳು ದೇವಸ್ಥಾನದ ಪ್ರಸ್ತಾಪಿತ ನೂತನ ಕಟ್ಟಡ ಹಾಗೂ ಜೀರ್ಣೋದ್ಧಾರ ಯೋಜನೆಯ ಮಾದರಿಯನ್ನು ವೀಕ್ಷಿಸಿ, ಸಮಿತಿ ಪದಾಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಆಶೀರ್ವಚನ ನೀಡಿದರು.
ಬಳಿಕ ಜೀರ್ಣೋದ್ಧಾರ ಸಮಿತಿ, ವಾರ್ಡ್ ಸಮಿತಿಯ ಸದಸ್ಯರು ಹಾಗೂ ಸಮಸ್ತ ಅನಂತನ ಭಕ್ತಾದಿಗಳು ಶ್ರೀಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ. ಶಾಂತರಾಮ ಸೂಡ, ಪ್ರಧಾನ ಕಾರ್ಯದರ್ಶಿ ಸಂತೋಷ ಕುಲಾಲ್ ಪಕ್ಕಾಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪ್ರಮೋದ್ ರೈ ಪಳಜೆ, ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕ ವೃಂದ ಹಾಗೂ ಅನಂತನ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -







