- Advertisement -
- Advertisement -
ವಿಟ್ಲ: ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯದಾದ್ಯಂತ ಲಾಕ್ ಡೌನ್ ತೆರವು ಮಾಡಿದ್ದರಿಂದ ದ.ಕ ಜಿಲ್ಲಾಡಳಿತದ ಸೂಚನೆಯಂತೆ ವಿಟ್ಲ ಪರಿಸರ ಸಹಜ ಸ್ಥಿತಿಗೆ ಮರಳಿದೆ.
ಬೆಳಿಗ್ಗೆನಿಂದಲೇ ವಿಟ್ಲದಲ್ಲಿ ಜನಜಂಗುಳಿ ಸೇರಿತ್ತು. ವಿಟ್ಲ ಪೇಟೆಯ ಎಲ್ಲಾ ಅಂಗಡಿಗಳು ತೆರೆದು ವ್ಯಾಪಾರ ವಹಿವಾಟು ಪ್ರಾರಂಭಗೊಂಡಿದೆ. ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಿಂದ ಪುತ್ತೂರು ರಸ್ತೆ ವರೆಗೆ ವಾಹನ ದಟ್ಟಣೆ ಉಂಟಾಗಿದೆ. ವಸ್ತುಗಳ ಖರೀದಿ ಜೋರಾಗಿತ್ತು. ಒಂದು ವಾರಗಳ ಕಾಲ ಜನರು ಪೇಟೆಗೆ ಆಗಮಿಸದ ಹಿನ್ನೆಲೆಯಲ್ಲಿ ಬ್ಯಾಂಕ್, ಸಹಕಾರಿ ಸೇರಿದಂತೆ ಮೊದಲಾದ ಕೇಂದ್ರಗಳಲ್ಲಿ ಜನ ಸಂದಣಿ ಹೆಚ್ಚು ಕಾಣಿಸಿಕೊಂಡಿದೆ.
- Advertisement -