- Advertisement -
- Advertisement -
ವಿಟ್ಲ: ಆಟಿ ಅಮವಾಸ್ಯೆ ದಿನ ಲಾಕ್ ಡೌನ್ ಇದ್ದ ಪರಿಣಾಮ ವಿಟ್ಲದಲ್ಲಿ ಬೆಳಿಗ್ಗೆ ಅಗತ್ಯ ಸಾಮಗ್ರಿ ಖರೀದಿಸಲು ಹೆಚ್ಚಿನ ಜನರು ಆಗಮಿಸಿದ್ದರೂ11 ಗಂಟೆಗೆ ಬಳಿಕ ವಿಟ್ಲ ಪೇಟೆ ಸಂಪೂರ್ಣ ಸ್ತಬ್ಧಗೊಂಡಿದೆ.



ಜಿಲ್ಲೆಯಾದ್ಯಂತ ಒಂದು ವಾರಗಳ ಲಾಕ್ ಡೌನ್ ಗೆ ಕರೆ ನೀಡಲಾಗಿತ್ತು. ಅದರಂತೆ 11 ಗಂಟೆಗೆ ವಿಟ್ಲ ಪೇಟೆ ಸಂಪೂರ್ಣ ಲಾಕ್ ಆಗಿತ್ತು. ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಲ್ಲಿ ಜನಜಂಗುಳಿ ತುಂಬಿತ್ತು. ಭಾನುವಾರ ಸಂಪೂರ್ಣ ಲಾಕ್ ಡೌನ್ ಇದ್ದುದರಿಂದ ಇಂದು ಪೇಟೆಯಲ್ಲಿ ಖರೀದಿ ಜೋರಾಗಿತ್ತು.
ಬಂಟ್ವಾಳ ಸಂಚಾರ ಠಾಣಾ ಎಸೈ ರಾಜೇಶ್ ಕೆವಿ ನೇತೃತ್ವದಲ್ಲಿ ವಿಟ್ಲ ಪೊಲೀಸರು ಅಲ್ಲಲ್ಲಿ ನಾಕಾಬಂಧಿ ಅಳವಡಿಸಿ,ಅನವಶ್ಯಕ ತಿರಗಾಡುವ ವಾಹನಗಳಿಗೆ ಎಚ್ಚರಿಕೆ ನೀಡಿ ಹಾಗೂ ವಾಹನ ತಪಾಸಣೆ ನಡೆಸುತ್ತಿದ್ದಾರೆ.


- Advertisement -