- Advertisement -
- Advertisement -
ವಿಟ್ಲ: ರಾಜ್ಯ ಸರ್ಕಾರದ ಸೂಚನೆಯಂತೆ ಭಾನುವಾರ ಲಾಕ್ ಡೌನ್ ಯಶಸ್ವಿಯಾಗಿದೆ.
ಲಾಕ್ ಡೌನ್ ತೆರವುಗೊಳಿಸಲಾಗಿತ್ತು. ಆದರೆ ಭಾನುವಾರ ಲಾಕ್ ಡೌನ್ ಗೆ ಯಾವುದೇ ವಿನಾಯಿತಿ ನೀಡಿರಲಿಲ್ಲ. ವಿಟ್ಲದಲ್ಲಿ ಬೆಳಿಗ್ಗೆನಿಂದಲೇ ಮೆಡಿಕಲ್ ಹಾಗೂ ಹಾಲು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದೆ.
ವಾಹನಗಳ ಓಡಾಟವು ಕೂಡ ಬಂದ್ ಆಗಿದ್ದು, ಆಸ್ಪತ್ರೆ ಸೇರಿದಂತೆ ಮೊದಲಾದ ತುರ್ತು ಸಂದರ್ಭದ ಒಂದೆರಡು ವಾಹನಗಳ ಓಡಾಟ ಕಂಡು ಬಂದಿದೆ. ವಿಟ್ಲ ಎಸೈ ವಿನೋದ್ ಎಸ್ ಕೆ ನೇತೃತ್ವದಲ್ಲಿ ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದರು. ಅಲ್ಲಲ್ಲಿ ನಾಕಾಬಂಧಿ ಅಳವಡಿಸಿದ್ದಾರೆ.
- Advertisement -