Tuesday, May 7, 2024
spot_imgspot_img
spot_imgspot_img

ಪುತ್ತೂರು: (ಡಿ.1, 2, 3, 4) ರಾಜ್ಯ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ’ಕ್ರೀಡಾ ಕಾರಂಜಿ’ – ಪತ್ರಿಕಾಗೋಷ್ಟಿ

- Advertisement -G L Acharya panikkar
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿ.ಪಂ., ಶಾಲಾ ಶಿಕ್ಷಣ ಉಪನಿರ್ದೇಶಕರ ಕಛೇರಿ ಮಂಗಳೂರು, ಪುತ್ತೂರು ಉಪವಿಭಾಗ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವರ ಸಹಯೋಗದೊಂದಿಗೆ ಶ್ರೀರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ನೇತೃತ್ವದಲ್ಲಿ ರಾಜ್ಯ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ಕಾರಂತರ ಕರ್ಮಭೂಮಿಯಲ್ಲಿ ಕ್ರೀಡಾ ಕಾರಂಜಿಯು ಡಿ.1, 2, 3 ಮತ್ತು 4ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.

ಆ ಪ್ರಯುಕ್ತ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ರಾಜ್ಯದ 35 ಜಿಲ್ಲೆಯ ಶಾಲೆಯಿಂದ 2250 ಬಾಲಕ ಬಾಲಕಿಯರು ಭಾಗವಹಿಸಲಿದ್ದಾರೆ‌. ತಾಲೂಕಿನ 17 ಶಾಲೆಯಲ್ಲಿ ತಂಗುವ ವ್ಯವಸ್ಥೆ ಇದೆ‌. ಉತ್ತರ ಕನ್ನಡಕ್ಕೆ ಸಂಬಂಧಿಸಿದ ಊಟಗಳು ಇರಲಿದೆ. ತಾ.2 ರಂದು ಸಂಜೆ 3 ಗಂಟೆಗೆ ದರ್ಬೆಯಿಂದ ಮೆರವಣಿಗೆ ನಡೆಯಲಿದೆ. 250ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಲಿದ್ದಾರೆ. ಜಿಲ್ಲೆಯ ನಿವೃತ್ತ ದೈಹಿಕ ‌ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಇದೆ. ಸುಮಾರು 56 ಲಕ್ಷ ಖರ್ಚು ಇದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು಼, ಶಿಕ್ಷಾಣಧಿಕಾರಿ ಲೋಕೇಶ್ ಆರ್., ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಪುತ್ತೂರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊಮ್ಮಂಡ, ಮುಖ್ಯಗುರು ಜಯಲಕ್ಷ್ಮಿ ಉಪಸ್ಥಿತರಿದ್ದರು.

- Advertisement -

Related news

error: Content is protected !!