



ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಇದರ ವಿಟ್ಲ ವಲಯದ ವತಿಯಿಂದ ಪುರುಷರ ಮತ್ತು ಮಳೆಯರ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಅ.25 ರಂದು ಸಂಜೆ 4 ಗಂಟೆಯಿಂದ ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಪುರುಷರ ಪಂದ್ಯಾಟದಲ್ಲಿ ಪ್ರಥಮ ₹15000/- ಮತ್ತು ಧ್ವನಿಬೆಳಕು ಟ್ರೋಫಿ,ದ್ವಿತೀಯ ₹10000/- ಮತ್ತು ಧ್ವನಿಬೆಳಕು ಟ್ರೋಫಿ, ತೃತೀಯ ₹5000/- ಮತ್ತು ಧ್ವನಿಬೆಳಕು ಟ್ರೋಫಿ,ಚತುರ್ಥ ₹ 5000/- ಮತ್ತು ಧ್ವನಿಬೆಳಕು ಟ್ರೋಫಿ ಮತ್ತು ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಟ್ರೋಫಿ ನೀಡಿ ಗೌರವಿಸಲಾಗುವುದು.
ಮಹಿಳೆಯರ ಪಂದ್ಯಾಟದಲ್ಲಿ ಪ್ರಥಮ 7,000 ನಗದು ಹಾಗೂ ಧ್ವನಿ ಬೆಳಕು ಟ್ರೋಪಿ,ದ್ವಿತೀಯ 4,000 ನಗದು ಹಾಗೂ ಧ್ವನಿ ಬೆಳಕು ಟ್ರೋಪಿ,ತೃತಿಯ 2,000 ನಗದು ಹಾಗೂ ಧ್ವನಿ ಬೆಳಕು ಟ್ರೋಪಿ, ಚತುರ್ಥ 2,000 ನಗದು ಹಾಗೂ ಧ್ವನಿ ಬೆಳಕು ಟ್ರೋಫಿಉತ್ತಮ ದಾಳಿಗಾರ್ತಿ, ಉತ್ತಮ ಹಿಡಿತಗಾರ್ತಿ ಮತ್ತು ಸವ್ಯಸಾಚಿ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.








