ಸೌಥಾಂಪ್ಟನ್:ಜೇಸನ್ ಹೋಲ್ಡರ್ ಹಾಗೂ ಶನನ್ ಗೇಬ್ರಿಯಲ್ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 204 ರನ್‌ಗಳಿಗೆ ಆಲೌಟ್ ಆಯಿತು.ಮಳೆಯಿಂದ ಮೊದಲ ದಿನ ಕೇವಲ 17.4 ಓವರ್‌ಗಳ ಆಟ ಸಾಧ್ಯವಾಗಿತ್ತು. ಇಂಗ್ಲೆಂಡ್ 35 ರನ್ನಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ಗುರುವಾರ ಮಳೆ ಇರಲಿಲ್ಲ. ಆರಂಭದಲ್ಲಿ ಶಾನನ್ ಗ್ಯಾಬ್ರಿಯಲ್ ಆತಿಥೇಯರಿಗೆ ಕಂಟಕವಾದರು. ಲಂಚ್ ವೇಳೆ ಇಂಗ್ಲೆಂಡ್ 106ಕ್ಕೆ 5 ವಿಕೆಟ್ ಉರುಳಿಸಿಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತು.
ಗ್ಯಾಬ್ರಿಯಲ್ ನಾಟೌಟ್ ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್ (30) ಮತ್ತು ಜೋ ಡೆನ್ಲಿ (18) ವಿಕೆಟ್ ಕಿತ್ತರು. ಜಾಕ್ ಕ್ರಾಲಿ (10) ಮತ್ತು ಓಲೀ ಪೋಪ್ (12) ವಿಕೆಟ್ ಹೋಲ್ಡರ್ ಪಾಲಾಯಿತು. ಇಂಗ್ಲೆಂಡ್ ಪರ ನಾಯಕ ಸ್ಟೋಕ್ಸ್ ಸರ್ವಾಧಿಕ 43 ರನ್ ಮಾಡಿದರು.ನಂತರ,ವಿಂಡೀಸ್ ತಂಡ ಪ್ರಥಮ ಇನಿಂಗ್ಸ್ ಆರಂಭಿಸಿ 19.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ.
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 67.3 ಓವರ್ಗಳಲ್ಲಿ 204 (ಬರ್ನ್ಸ್ 30, ಡೆನ್ಲಿ 18, ಕ್ರೌಲಿ 10, ಬೆನ್ ಸ್ಟೋಕ್ಸ್ 43, ಪೋಪ್ 12, ಬಟ್ಲರ್ 35, ಡೊಮಿನಿಕ್ ಬೆಸ್ 31*), ಶನನ್ ಗ್ಯಾಬ್ರಿಯೆಲ್ 62ಕ್ಕೆ 4, ಹೋಲ್ಡರ್ 42ಕ್ಕೆ 6).
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ :19.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 57 ರನ್. ಬ್ರಾಥ್ ವೇಟ್ ಬ್ಯಾಟಿಂಗ್ 20, ಕ್ಯಾಂಪ್‌ಬೆಲ್ 28