- Advertisement -
- Advertisement -




1956 ರಲ್ಲಿ ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಮಹಬೂಬ್ ಶಂಶೇರ್ ಖಾನ್ ಇವರ ಸವಿ ನೆನಪಿನ ಪ್ರಯುಕ್ತವಾಗಿ ಮಾಸ್ಟರ್ ಅಕ್ವಾಟಿಕ್ ಫಡೋರೇಶನ್ ಆಫ್ ಇಂಡಿಯಾ ಇದರ ನೇತೃತ್ವದ ಸಹಯೋಗದಲ್ಲಿ “ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ 2025” ಮಂಗಳಗಿರಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ತಾರೀಕು 11/ 10/ 2025 ರಂದು ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ನಮ್ಮ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ಇವರು ತಮ್ಮ ಪ್ರದರ್ಶನವನ್ನು ನೀಡುವುದರೊಂದಿಗೆ ತಾವು ಭಾಗವಹಿಸಿದ ಐದು ಸ್ಪರ್ಧೆಯಲ್ಲೂ ಐದು ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರು ಗೋಪಾಲ ಸಪಲ್ಯ ಹಾಗೂ ಲೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿ ಈಜುವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಅತ್ಯುತ್ತಮ ಈಜುತರಬೇತುಗಾರ್ತಿ ಎಂದೂ ಸಹ ಗುರುತಿಸಿಕೊಂಡಿದ್ದಾರೆ.
- Advertisement -








