




ವಿಟ್ಲ: ಮಂಗಳಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.14 ಮತ್ತು 15 ರಂದು ಮಂಗಳಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಸೆ.14 ಸೋಮವಾರದಂದು ಬೆಳಗ್ಗೆ 4.16 ರ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಹವನ ಹಾಗೂ ಮೂರ್ತಿ ಪ್ರತಿಷ್ಠೆ, 8 ಗಂಟೆಗೆ ಭಜನೆ, 12.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 2 ಗಂಟೆಗೆ ಭಕ್ತಿಗೀತಾ ಸ್ಪರ್ಧೆ, ಸಂಜೆ 6ಕ್ಕೆ ಪ್ರತಿಭಾ ದರ್ಶಿನಿ ಸಾಂಸ್ಕೃತಿಕ ಕಾರ್ಯಕ್ರಮ, 7ಕ್ಕೆ ಧಾರ್ಮಿಕ ಸಭೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ವೈದಿಕ ವಿದ್ವಾಂಸರಾದ ಶ್ರೀಕೃಷ್ಣ ಉಪಾಧ್ಯಾಯ ಕೆದಿಲ ದಿಕ್ಸೂಚಿ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಯತೀಶ್ ರಾಘವ ಪೂಜಾರಿ ಹೊಸಗದ್ದೆ, ಮಾಲಕರು,ವಿಜಯಲಕ್ಷ್ಮೀ ಜಲ್ಲಿಕ್ರೆಶರ್ ವಿಟ್ಲ, ದರ್ಬೆ ಈಶ್ವರ ಭಟ್ ಕೈಂತಿಲ ಹಿರಿಯ ವಕೀಲರು, ಮಂಗಳೂರು, ಸಂಜೀವ ಮಠಂದೂರು ಮಾಜಿಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ಅರುಣ್ ಕುಮಾರ್ ಪುತ್ತಿಲ ಧಾರ್ಮಿಕ ಮುಖಂಡರು, ಸ್ಥಾಪಕಾಧ್ಯಕ್ಷರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಚಿತ್ತರಂಜನ ಶೆಟ್ಟಿ ಬೊಂಡಾಲ, ಸಾಮಾಜಿಕ ಕಾರ್ಯಕರ್ತರು, ರಾಮ್ ದಾಸ್ ಶೆಟ್ಟಿ ಪಾತ್ರತೋಟ, ಉದ್ಯಮಿಗಳು ವಿ.ಟಿ.ವಿ ಚಾನೆಲ್, ನವೀನ್ ಶೆಟ್ಟಿ ಪಾತ್ರತೋಟ, ಹೋಟೇಲ್ ಉದ್ಯಮಿ, ಎಂ.ಆರ್.ಪಿ.ಎಲ್ ಮಂಗಳೂರು, ನಿಡ್ಯ ಸಂಜೀವ ಪೂಜಾರಿ ಅಧ್ಯಕ್ಷರು, ಬ್ರಹ್ಮಶ್ರೀ ವಿವಿದ್ದೋದೇಶ ಸಹಕಾರಿ ಸಂಘ ವಿಟ್ಲ, ಮೋಹನ್‌ಶೆಟ್ಟಿ ಬೆಂಜ್ಞಂತ್ತಿಮಾರು ಗುತ್ತು, ಉದ್ಯಮಿಗಳು, ನಾಗಪ್ಪ ಗೌಡ ಕಾಡಬರಿ ಪ್ರಗತಿಪರ ಕೃಷಿಕರು ಭಾಗವಹಿಸಲಿದ್ದಾರೆ.
ರಾತ್ರಿ 8:00 ಗಂಟೆಗೆ ರಂಗಪೂಜೆ ಮಹಾಮಂಗಳಾರತಿ, ಅನ್ನಸಂತರ್ಪಣೆ.
ರಾತ್ರಿ 9ಕ್ಕೆ ಸಾಂಸ್ಕೃತಿಕ ವೈಭವದ ಅಂಗವಾಗಿ ಶ್ರೀ ದುರ್ಗಾಂಬಾಕಲಾವಿದರು ವರಪ್ಪಾದೆ ವಿಟ್ಲ, ಅಭಿನಯಿಸುವ “ಸಾಲ” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಸೆ.15 ಮಂಗಳವಾರದಂದು ಪೂರ್ವಾಹ್ನ ಗಣಪತಿ ಹವನ ವೈದಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ 8:00 ಗಂಟೆಗೆ ಶ್ರೀ ಗಣಪತಿ ದೇವರಿಗೆ 108ಕಾಯಿಗಳ ಮಹಾಗಣಪತಿ ಯಾಗ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ.
4:30 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ ಬಳಿಕ ಸಂಜೆ 5:00 ಕ್ಕೆ ಶ್ರೀ ದೇವರ ವೈಭವದ ಶೋಭಾಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯಲ್ಲಿ ಮಕ್ಕಳ ಕುಣಿತ ಭಜನೆ, ಶ್ರೀಸಾಯಿ ಟೈಗರ್ಸ್ ಮಂಗಳಪದವು ಇವರಿಂದ ಆಕರ್ಷಕ ಹುಲಿವೇಷ, ಚಕ್ರವರ್ತಿ ನಾಸಿಕ್ ಗ್ರೂಪ್ & ಚಕ್ರವರ್ತಿ ಗೆಳೆಯರ ಬಳಗ ಮಂಗಳಪದವು ಇವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ, ಶಿವಾಜಿ ಫ್ರೆಂಡ್ಸ್ ಮಂಗಳಪದವು ಇವರಿಂದ ಆಕರ್ಷಕ ಚೆಂಡೆ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.
ಸೆ.13 ರವಿವಾರದಂದು ಊರಿನವರಿಗೆ ವಿವಿಧ ಕ್ರೀಡಾಕೂಟ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಭಕ್ತ ಭಾಂಧವರೆಲ್ಲರೂ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಪ್ರಸಾದ ಸ್ವೀಕರಿಸಿ, ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರು ಮಹಾಲಿಂಗ ಭಟ್, ಪ್ರಧಾನ ಕಾರ್ಯದರ್ಶಿ ಶಿವಾನಂದ ವಕ್ಕೆತ್ತಿರಿ ಹಾಗೂ ಕಾರ್ಯದರ್ಶಿ, ಮಹಿಳಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








