Sunday, September 6, 2026
spot_imgspot_img
spot_imgspot_img

ವಿಟ್ಲ: (18-26) ಬದ್ರಿಕಾಶ್ರಮದಿಂದ ಪರ್ತಗಾಲಿ ಜೀವೋತ್ತಮ ಮಠಕ್ಕೆ ರಾಮನಾಮ ದಿಗ್ವಿಜಯ ರಥ ಯಾತ್ರೆ

- Advertisement -
- Advertisement -

120 ಜಪಾ ಕೇಂದ್ರಗಳಿಗೆ ಭೇಟಿ

ವಿಟ್ಲ ಶ್ರೀ ಸಂಸ್ಥಾನ ಗೋಕರ್ಣ ಪರ್ತಾಗಾಲಿ ಜೀವೋತ್ತಮ ಮಠದ ಐನೂರ ಐವತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಶ್ರೀ ಸ್ವಾಮೀಜಿಯವರ ಆಜ್ಞೆಯಂತೆ ಸಾವಿರದ ಪಂಚ ಶತಮಾನೋತ್ಸವ ಏರ್ಪಡಿಸಲಾಗಿದ್ದು ಆ ಪ್ರಯುಕ್ತ ಶ್ರೀ ರಾಮನಾಮ ದಿಗ್ವಿಜಯ ರಥವು 18-10-2025ನೇ ಶನಿವಾರದಂದು ಬದ್ರಿಕಾಶ್ರಮದಿಂದ ಹೊರಟು 26-11-2025 ರಂದು ಪರ್ತಗಾಲಿ ಜೀವೋತ್ತಮ ಮಠಕ್ಕೆ ತಲುಪಲಿದೆ. ಈ ರಥವು 120 ಜಪಾ ಕೇಂದ್ರಗಳಿಗೆ ಬೇಟಿ ಕೊಟ್ಟು ಅಲ್ಲಿ ಸೇರುವ ಭಕ್ತರನ್ನು ಹರಸಿ ಮುಂದವರಯುತ್ತದೆ.

ಈ ರಥವು ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರಲ್ಲಿರುವ ಸತ್ಯವ್ರತ ಜಪಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ವಿಟ್ಲ ಜಿ ಎಸ್ ಬಿ ಸಮಾಜದವರು ವಿಟ್ಲ ನವಿಲು ಬಸದಿ ಬಳಿ ರಥವನ್ನು ಸ್ವಾಗತಿಸಿ ಶ್ರೀ ರಾಮ ಮಂದಿರಕ್ಕ ವಾಹನಗಳ ಮೆರವಣಿಗೆ ಮೂಲಕ ತಲಪಿಸಲಾಯಿತು. ರಥವು ಇಲ್ಲಿಂದ ಮುಂದುವರಿದು ಮೊಗರ್ನಾಡು ವೈದೇಹಿಕಾಂತ ಜಪಾ ಕೇಂದ್ರಕ್ಕೆ ಹೊರಟಿತು.

- Advertisement -

Related news

error: Content is protected !!