



ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯ ಮುಂಭಾಗದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಮಶ್ಹೂರ್ ರವರ ಹೆಸರಿನಲ್ಲಿ ವಿಟ್ಲ ಮಖಾಂ ಉರೂಸ್ ಹಾಗೂ ನಾಲ್ಕು ದಿನಗಳ ಮತಪ್ರವಚನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಉರೂಸ್ ಸಮಾರೋಪ ಸಮಾರಂಭದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರುದ.ಕ.ಜಿಲ್ಲಾ ಖಾಝಿ ತ್ವಾಕಾ ಅಹಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಅಲಿ ತಂಙಳ್ ಕುಂಬೋಳ್ ದುವಾಃ ನೆರವೇರಿಸಿದರು. ಅಸ್ಸಯ್ಯದ್ ಎಸ್.ಎಂ.ಮಹಮ್ಮದ್ ತಂಙಳ್ ಸಾಲ್ಮರ ಕೂಟು ಝಿಯಾರತ್ ನೇತೃತ್ವ ವಹಿಸಿದ್ದರು. ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡಿದರು.ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ, ಉಕ್ಕುಡ ಮಸೀದಿ ಖತೀಬ್ ಹಾಫಿಳ್ ಅಹಮದ್ ಶರೀಫ್ ಸಖಾಫಿ,ಮಸೀದಿ ಖತೀಬ್ ಅಬ್ದುಲ್ ರಹಿಮಾನ್ ಫೈಝಿ, ಬೆಳ್ಳಾರೆ ಮುದರಿಸ್ ನಸೀಹ್ ದಾರಮಿ,ಮರಕ್ಕಿಣಿ ಖತೀಬ್ ಮಹಮ್ಮದಾಲಿ ಫೈಝಿ ಇರ್ಫಾನಿ,ಕಾನತ್ತಡ್ಕ ಖತೀಬ್ ಅಬ್ದುಲ್ ಖಾದರ್ ಸಖಾಫಿ,ಬೊಬ್ಬೆಕೇರಿ ಸದರ್ ಅಬ್ದುಲ್ ಹಮೀದ್ ಇರ್ಫಾನಿ, ನೀರಕ್ಕಣಿ ಸದರ್,ಮಹಮ್ಮದ್ ಮುಸ್ಲಿಯಾರ್, ಗಾಂಧಿನಗರ ಮದರಸದ ಸದರ್ ಖಾಸಿಂ ಸಅದಿ , ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಉಪಾಧ್ಯಕ್ಷರಾದ ಮಹಮ್ಮದ್ ಗಮಿ ಹಾಗೂ ವಿ.ಎಸ್ ಇಬ್ರಾಹಿಂ, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿ ಶರೀಫ್ ಪೊನ್ನೋಟು,ಉರೂಸ್ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್ ಪರ್ತಿಪ್ಪಾಡಿ,ಕಾರ್ಯದರ್ಶಿ ರಫೀಕ್ ಪೊನ್ನೋಟು, ಜೊತೆ ಕಾರ್ಯದರ್ಶಿ ಮಹಮ್ಮದ್ ಅಲಿ, ಕೋಶಾಧಿಕಾರಿ ಬಿ.ಎಂ.ಅಬ್ದುಲ್ ಖಾದರ್,ಮದರಸ ಸಮಿತಿ ಅಧ್ಯಕ್ಷ ಶಮೀರ್ ಪಳಿಕೆ,ವಿ.ಕೆ.ಹಂಝ,ಹನೀಫ್ ರೆಡ್,ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ,ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ ಮುಂತಾದವರು ಉಪಸ್ಥಿತರಿದ್ದರು.ವಿಟ್ಲ ಮಸೀದಿ ಖತೀಬ್ ದಾವೂದ್ ಹನೀಫಿ ಸ್ವಾಗತಿಸಿದರು. ಕೆ.ಎಂ.ಎ.ಕೊಡಂಗಾಯಿ ನಿರೂಪಿಸಿದರು.