Tuesday, September 8, 2026
spot_imgspot_img
spot_imgspot_img

ವಿಟ್ಲ: ಪೂರ್ಲಪ್ಪಾಡಿಯಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂಭ್ರಮ

- Advertisement -
- Advertisement -

ವಿಟ್ಲ ಪಡ್ನೂರು: ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಸಹಯೋಗದಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹಿರಿಯರಾದ ಬಾಬು ಗೌಡ ಖಂಡಿಗ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭವು ರೋಟರಿ ಕ್ಲಬ್ ವಿಟ್ಲ ಅಧ್ಯಕ್ಷ RTN ಕ್ಯಾಪ್ಟನ್ ದಾಸಪ್ಪ ಪೂಜಾರಿ ಎನ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಠಲ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಣ್ಣಪ್ಪ ಸಾಸ್ತನ, ನಿವೃತ್ತ ಅಂಚೆ ಪಾಲಕಿ ಸವಿತಾ ತಿರುಮಲೇಶ್ವರ ಭಟ್, ಮೂರ್ಕಜೆ ಮೈತ್ರೇಯಿ ಗುರುಕುಲದ ಮಾತೃಶ್ರೀ ಚಂಪಕಾವತಿ, ಪತಂಜಲಿ ಯೋಗ ಸಮಿತಿ ವಿಟ್ಲ ನಗರ ಸಂಚಾಲಕ ಪ್ರಕಾಶ್ ಅಣ್ಣಡ್ಕ, ಯಕ್ಷಗಾನ ಅರ್ಥದಾರಿ ಜಗದೀಶ್ ರೈ ಪನಡ್ಕ, ಮಲರಾಯಿ ದೇವಸ್ಥಾನ ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷ ವಕೀಲ ರಾಮಣ್ಣ ಗೌಡ ದೇವರಮನೆ, ಶಿಲ್ಪಶ್ರೀ ಯುವಕ ಮಂಡಲ ಅಧ್ಯಕ್ಷ ರೋಹಿತ್ ರೈ ಚೆಂಬರಡ್ಕ, ಮೊಸರು ಕುಡಿಕೆ ಸಮಿತಿ ಗೌರವಾಧ್ಯಕ್ಷ ಈಶ್ವರ ಭಟ್ ಪೂರ್ಲಪ್ಪಾಡಿ, ಅಧ್ಯಕ್ಷ ನಾಗೇಶ್ ಪೂಜಾರಿ ಪೂರ್ಲಪ್ಪಾಡಿ, ಶ್ರೀವರ ಯುವಕ ಮಂಡಲ ಅಧ್ಯಕ್ಷ ಕಿರಣ್ ಚಂದ್ರ ಆಳ್ವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕುಮಾರಿ ವನಜ ಹಾಗೂ ವೈಶಾಕ್ ಪ್ರಾರ್ಥಿಸಿದರು. ಜಯಂತ್ ಸ್ವಾಗತಿಸಿ, ವರದಿ ಮಂಡಿಸಿದರು. ಹರೀಶ್ ವಿಟ್ಲ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ ನಡೆಯಿತು.

- Advertisement -

Related news

error: Content is protected !!