Wednesday, August 12, 2026
spot_imgspot_img
spot_imgspot_img

ವಿಟ್ಲ ಜೇಸಿ ಶಾಲೆಯಲ್ಲಿ ‘ಒಂದು ಭೂಮಿ ಒಂದು ಆರೋಗ್ಯ’ 11ನೇ ವರ್ಷದ ವಿಶ್ವ ಯೋಗ ದಿನಾಚರಣೆ

- Advertisement -
- Advertisement -

ವಿಟ್ಲ: ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ 11ನೇ ವರ್ಷ ದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ದ ಮುಖ್ಯ ಅತಿಥಿ ಗಳಾದ ಹರಿಪ್ರಸಾದ್, ಯೋಗ ಶಿಕ್ಷಕರು, ಪತಂಜಲಿ ಯೋಗ ಸಮಿತಿ ಇವರು ಮಾತನಾಡುತ್ತಾ, ಉಸಿರು, ಮನಸ್ಸು ಹಾಗೂ ದೇಹ ಇವುಗಳ ಸಂಪೂರ್ಣ ಜೋಡಣೆಯೇ ಯೋಗ, ಪ್ರಾಚೀನ ಜೀವನ ಪದ್ಧತಿ ಮರೆಯಾಗುತ್ತಿರುವ ಈ ಕಾಲಕ್ಕೆ ಯೋಗಾಭ್ಯಾಸದ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ಸಂಸ್ಥೆ ಯ ಕಾರ್ಯದರ್ಶಿ ಎ. ಮೋಹನ ರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಯೋಗ ಪ್ರತಿಜ್ಞೆ ಯನ್ನು ಕೈಗೊಂಡರು. 8ನೇ ತರಗತಿ ವಿದ್ಯಾರ್ಥಿನಿ ಕು. ಸನ್ನಿಧಿ ಯವರಿಂದ ಯೋಗ ಪ್ರದರ್ಶನ ಮುಡಿಬಂತು.. ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಸಂಸ್ಥೆ ಯ ವಿವಿಧ ಶಿಕ್ಷಕರಿಂದ ಯೋಗಾಭ್ಯಾಸ ನಡೆಸಲಾಯಿತು. ಪ್ರಾಂಶುಪಾಲ ಜಯರಾಮ ರೈ ಯವರು ವಂದಿಸಿದರು. ಕಾರ್ಯಕ್ರಮ ದಲ್ಲಿ ಶಾಲಾ ಆಡಳಿತಾಧಿಕಾರಿ ಎ ರಾಧಾಕೃಷ್ಣ ಎರುoಬು, ಉಪಾಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಶೆಣೈ ಉಪಸ್ಥಿತರಿದ್ದರು.ಶಿಕ್ಷಕಿ ಕವಿತಾ ಶೇಷಪ್ಪ ಪ್ರಾರ್ಥಿಸಿ, ಶಿಕ್ಷಕಿ ದೇವಿಕಾ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!