Monday, April 29, 2024
spot_imgspot_img
spot_imgspot_img

ವಿಟ್ಲ: (ಅ.15) ವಿನೂತನ ಯುವಕ ಮಂಡಲ(ರಿ.) ಬೊಳಂತಿಮೊಗರು ಇದರ ಆಶ್ರಯದಲ್ಲಿ 21ನೇ ವರ್ಷದ ದಸರಾ ಕ್ರೀಡಾಕೂಟ

- Advertisement -G L Acharya panikkar
- Advertisement -

ವಿಟ್ಲ: ವಿನೂತನ ಯುವಕ ಮಂಡಲ(ರಿ.) ಬೊಳಂತಿಮೊಗರು ಇದರ ಆಶ್ರಯದಲ್ಲಿ 21ನೇ ವರ್ಷದ ದಸರಾ ಕ್ರೀಡಾಕೂಟವು ಅ.15ರಂದು ಬೆಳಿಗ್ಗೆ 8.30 ಕ್ಕೆ ವಿನೂತನ ಕ್ರೀಡಾಂಗಣ ಬೊಳಂತಿಮೊಗರು ಇಲ್ಲಿ ನಡೆಯಲಿದೆ.

ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಲ| ಜಲಜಾಕ್ಷಿ ಬಾಲಕೃಷ್ಣ ಗೌಡ, ಪೊನ್ನೆತ್ತಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ, ಕಾಮಟ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂಬಳಬೆಟ್ಟು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ವಾರಿಜ ಸೋಮಪ್ಪ, ಸುರುಳಿಮೂಲೆ, ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಶಿಕ್ಷಕಿ ಚೇತನಾ ಧನಂಜಯ ನಾಯ್ತೊಟ್ಟು, ಹರೀಶ್ ಆಚಾರ್ಯ, ಕೈಂತಿಲ ಉದ್ಯಮಿ ಮಂಗಳಪದವು, ಬಂಟ್ವಾಳ ಸಹಾಯಕ ಇಂಜಿನಿಯರ್‍ ಜಯರಾಮ ಎಮ್, ಕಾಡಬರೆ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ನಿವೃತ್ತ ಭೂಸೇನಾ ಯೋಧರು, ’ಬೊಳಂತಿಮೊಗರು ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಧನಂಜಯ ಗೌಡ ನಾಯ್ತೊಟ್ಟು, ಶಿರಸಿ ಸರಕಾರಿ ಪ್ರೌಢಶಾಲೆ ಅಧ್ಯಾಪಕ ಅನಿಲ್ ವಡಗೇರಿ, ಉಮೇಶ ಚಿತ್ರಕಲಾ ಅಧ್ಯಾಪಕ R.N.S.A ವಿಟ್ಲ, ಓಜಾಲ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯ ಅಧ್ಯಾಪಕಿ ನೇತ್ರಾವತಿ ಹಾಗೂ 2022-23ನೇ ಸಾಲಿನಲ್ಲಿ sslc ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೊಳಂತಿಮೊಗರು ಸರಕಾರಿ ಪ್ರೌಢಶಾಲೆಯ ಮಾಜಿ ಕಾರ್ಯಾಧ್ಯಕ್ಷ ಜಗದೀಶ್ಚಂದ್ರ ನಾಯ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಮೇಶ್ವರ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ವೀರಪ್ಪ ಗೌಡ ರಾಯರಬೆಟ್ಟು, ಪೂವಪ್ಪ ಅಂಚನ್ ಮಾಡ್ತೇಲು, ಪೆರ್ನೆ ಶ್ರೀರಾಮಚಂದ್ರ ಅನುದಾನಿತ ಪ್ರೌಢಶಾಲೆಯ ಗಣಿತ ಶಿಕ್ಷಕ ರಾಕೇಶ್ ಕೆ.ಎನ್, ಉರಿಮಜಲು ಪಂಚಶ್ರೀ ಹಾರ್ಡ್‌‌ವೇರ್‌ನ ಯೋಗೀಶ್ ಗೌಡ ಕಾಮಟ, ಇರಂದೂರು ನವಚೇತನ ಗೆಳೆಯರ ಬಳಗ ಅಧ್ಯಕ್ಷ ಅಶೋಕ್ ಪಡೀಲು, ಮಾಮೇಶ್ವರ ತ್ರಿಶೂಲ್ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಶಾಂತ್ ಅಡ್ಡಾಳಿ ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳಿಗೆ, ಪ್ರಾಥಮಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
22-10-2023 ಆದಿತ್ಯವಾರ ಬೆಳಿಗ್ಗೆ ಗಂಟೆ 8 ಕ್ಕೆ ಆಯುಧಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!