Tuesday, July 21, 2026
spot_imgspot_img
spot_imgspot_img

ವಿಟ್ಲ: ವೈಭವಯುತವಾಗಿ ಸಂಪನ್ನಗೊಂಡ ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯಸ್ಪರ್ಧೆ “ಗೆಜ್ಜೆನಾದ -2025”

- Advertisement -
- Advertisement -

ಗೆಜ್ಜೆನಾದ ಟ್ರೋಫಿ ಪ್ರಥಮ ಬಹುಮಾನ ಮುಡಿಗೆರಿಸಿಕೊಂಡ ಮಂಗಳೂರಿನ ಋತ್ವ ಎಚ್.ಪಿ, ಪುತ್ತೂರಿನ ವಿದ್ಯಾಶ್ರೀ ರೈ ದ್ವಿತೀಯ

ವಿಟ್ಲ : ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸಿದ ಬಹುನಿರೀಕ್ಷಿತ ಏಕವ್ಯಕ್ತಿ ನೃತ್ಯಸ್ಪರ್ಧೆ “ಗೆಜ್ಜೆನಾದ -2025” ವೈಭವಯುತವಾಗಿ ನಡೆದು ಸಂಪನ್ನಗೊಂಡಿದೆ.

ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ 29 ಸ್ಪರ್ಧಿಗಳ ನಡುವೆ ರೋಚಕತೆಯಿಂದ ಕೂಡಿದ “ಗೆಜ್ಜೆನಾದ-2025″ಏಕವ್ಯಕ್ತಿ ನೃತ್ಯಸ್ಪರ್ಧೆ ಅನೇಕ ಗಣ್ಯ ಅತಿಥಿಗಳ ಭಾಗವಹಿಸುವಿಕೆ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಬಹಳ ಸಂಭ್ರಮದಿಂದ ಕೂಡಿತ್ತು.

“ಗೆಜ್ಜೆನಾದ -2025″ಏಕವ್ಯಕ್ತಿ ನೃತ್ಯ ಸ್ಪರ್ಧೆಯ ವಿಜೇತರಾಗಿ ಮಂಗಳೂರಿನ ಋತ್ವ ಎಚ್. ಪಿ ಹೊರಹೋಮ್ಮಿದರೆ, ಪುತ್ತೂರಿನ ವಿದ್ಯಾಶ್ರೀ ರೈ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.

ಪ್ರಥಮ ಸ್ಥಾನ ಪಡೆದ ಋತ್ವ ಎಚ್. ಪಿ ಅವರು 10,000 ನಗದು ಮತ್ತು ಗೆಜ್ಜೆನಾದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ವಿದ್ಯಾಶ್ರೀ ರೈ ಅವರು 5,000 ನಗದು ಮತ್ತು ಗೆಜ್ಜೆನಾದ ಟ್ರೋಫಿ ಕಲಾತಪಸ್ವಿ ತಂಡದಿಂದ ಬಹುಮಾನವಾಗಿ ಪಡೆದುಕೊಂಡರು. ಉಳಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರವನ್ನು ನೀಡಿಗೌರವಿಸಲಾಯಿತು. ಕಲಾತಪಸ್ವಿ ತಂಡದ ನಿರ್ದೇಶಕ ಜೈದೀಪ್ ಅಮೈ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!