Thursday, April 25, 2024
spot_imgspot_img
spot_imgspot_img

ವಿಟ್ಲ: ಅಳಿಕೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ಸಭೆ

- Advertisement -G L Acharya panikkar
- Advertisement -

ವಿಟ್ಲ: ಅಳಿಕೆ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ಸಭೆ ಸೋಮವಾರದಂದು ಅಳಿಕೆ ಪಂಚಾಯಿತಿ ಸಭಾ ಭವನದಲ್ಲಿ ನಡೆಯಿತು.

ಗ್ರಾಮದಲ್ಲಿ ಕರೋನಾ ಸೋಂಕು ದೃಢಪಟ್ಟು, ಹೋಮ್ ಐಸೋಲೇಷನ್ ನಲ್ಲಿರುವ 23 ಮನೆಗಳಲ್ಲಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ 15 ಕುಟುಂಬಗಳಿಗೆ ಪಂಚಾಯಿತಿ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಸುಮಾರು 51 ಸಾವಿರ ವೆಚ್ಚದಲ್ಲಿ 8 ಸೆಟ್ ಥರ್ಮೋಮೀಟರ್, ಆಕ್ಸಿಮೀಟರ್ ಖರೀದಿಸಿದ್ದು, 6 ಮಂದಿ ಆಶಾಕಾರ್ಯಕರ್ತರಿಗೆ ಛತ್ರಿ ಸಹಿತವಾದ 6 ಸೆಟ್ ಥರ್ಮೋಮೀಟರ್, ಆಕ್ಸಿಮೀಟರ್ ಸೆಟ್ ನೀಡಲಾಯಿತು.

ಅಳಿಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ, ಗ್ರಾಮ ಕರಣಿಕ ಸತೀಶ್ ಸುವರ್ಣ, ಸಿಆರ್‌ಪಿ ಚಂದ್ರಶೇಖರ, ಉಪಾಧ್ಯಕ್ಷ ಜಗದೀಶ ಶೆಟ್ಟ ಮುಳಿಯ, ಸದಸ್ಯರಾದ ಭಗೀರಥಿ ಎಸ್, ಗಿರಿಜಾ ಎನ್, ಸುಕುಮಾರ್, ಸೀತಾರಾಮ ಶೆಟ್ಟಿ, ಪದ್ಮನಾಭ ಪೂಜಾರಿ, ಶಾಂಭವಿ, ಸದಾಶಿವ ಶೆಟ್ಟಿ, ಬೀಟ್ ಪೊಲೀಸ್ ಅನುಕುಮಾರ್, ಅಳಿಕೆ ಶಾಲಾ ಮುಖ್ಯ ಶಿಕ್ಷಕ ಈಶ್ವರ ನಾಯ್ಕ, ಗೀತಾ ಕಲ್ಲಜೇರ, ನಳಿನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!