


ವಿಟ್ಲ: ಸ.ಪ್ರೌ.ಶಾಲೆಯಲ್ಲಿ ’ಆಟಿಡೊಂಜಿ ದಿನ’ ಕಾರ್ಯಕ್ರಮವು ನಡೆಯಿತು. ಕಾರ್‍ಯಕ್ರಮವನ್ನು ರಂಗಕಲಾವಿದ ಸುಬ್ಬು ಸಂಟ್ಯಾರ್ ದೀಪ ಬೆಳಗಿಸಿ ತೆನೆ ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಆಟಿ ತಿಂಗಳ ಮಹತ್ವವನ್ನು ವಿವರಿಸಿದರು.


ಸಭೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ.ಪಂ. ಕೌನ್ಸಿಲರ್ ರವಿಪ್ರಕಾಶ್, ಎಸ್.ಡಿ.ಎಂ.ಸಿ ಸದಸ್ಯ ವಾಸುದೇವ ಪ್ರಭು, ರಾಜಶೇಖರ ವಿಟ್ಲ, ರಾಜೇಶ್ ವಿಟ್ಲ, ಸುನೀತಾ ಕೋಟ್ಯಾನ್, ಸೋಮಶೇಖರ ಶೆಟ್ಟಿ, ರಶೀದ್, ಶಾಲೆಯ ಎಲ್ಲಾ ಕಾರ್‍ಯಕ್ರಮದಲ್ಲಿ ಬೆನ್ನೆಲುಬು ಆಗಿರುವ ಸುಬ್ರಾಯ ಪೈ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ವಾರಿಜ ಕುಮಾರಿಯವರು ಅತಿಥಿಗಳನ್ನು ತಾಂಬೂಲ ನೀಡುವುದರ ಮೂಲಕ ಕಾರ್‍ಯಕ್ರಮಕ್ಕೆ ಸ್ವಾಗತ ಕೋರಿದರು. ಗೌರವ ಶಿಕ್ಷಕಿ ರೇಷ್ಮ ಕಾರ್‍ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ದಿವ್ಯ ವಂದಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್‍ಯಕ್ರಮ ನಡೆಯಿತು.
Fb: glacharya