Friday, April 26, 2024
spot_imgspot_img
spot_imgspot_img

ಮಂಗಳೂರು : ದೈವ ಹಾಗೂ ದೇವಸ್ಥಾನಗಳಲ್ಲಿ ಅನಾಚಾರ ವೆಸಗುತ್ತಿದ್ದ ದುಷ್ಕರ್ಮಿಗಳ ಬಂಧನ !

- Advertisement -G L Acharya panikkar
- Advertisement -

ಮಂಗಳೂರು : ದೈವ ಹಾಗೂ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಯನ್ನು ಕದ್ದು ಅನಾಚಾರ ವೆಸಗುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ಸಿಯಾಗಿದ್ದಾರೆ.

ಇತ್ತೀಚಿಗಷ್ಟೇ ಮಂಗಳೂರಿನ ಹಲವು ಕಡೆಗಳಲ್ಲಿನ ಕೊರಗಜ್ಜ ದೈವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಕಾಣಿಕೆ ಹುಂಡಿಯನ್ನು ಕದ್ದ ನಂತರದಲ್ಲಿ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಹಾಕುತ್ತಿದ್ದರು.

ಮಲ, ಮೂತ್ರ ವಿಸರ್ಜನೆಯನ್ನು ಮಾಡಿ ಪರಾರಿಯಾಗುತ್ತಿದ್ದರು.ಸೈಕೋ ಕಳ್ಳರ ಹಾವಳಿ ಭಕ್ತರನ್ನು ಕೆರಳಿಸಿದ್ದು, ಪೊಲೀಸರಿಗೆ ತಲೆನೋವು ತರಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಲೆ ಬೀಸಿದ್ದು ಈಗಾಗಲೇ ಮೊಹಮ್ಮದ್ ಸುಹೈಲ್ ಹಾಗೂ ಸಿರಾಜುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ. ಈ ತಂಡದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರಾಗಿದ್ದು, ಮಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಕಾಣಿಕೆ ಕದ್ದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಆರೋಪಿಗಳು ಜೈಲು ಸೇರಿದ್ದಾರೆ.

- Advertisement -

Related news

error: Content is protected !!