Thursday, June 18, 2026
spot_imgspot_img
spot_imgspot_img

ವಿಟ್ಲ: (ಆ.31) ಯುವಕ ಮಂಡಲ ( ರಿ.) ವಿಟ್ಲ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 47ನೇ ವರ್ಷದ ಮೊಸರು ಕುಡಿಕೆ ಉತ್ಸವ

- Advertisement -
- Advertisement -

ವಿಟ್ಲ: ಪ್ರಶಸ್ತಿ ವಿಜೇತ ಯುವಕ ಮಂಡಲ ( ರಿ. ) ವಿಟ್ಲ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 47ನೇ ವರ್ಷದ ಮೊಸರು ಕುಡಿಕೆ ಉತ್ಸವ ದಿನಾಂಕ 31-08-2024 ನೇ ಶನಿವಾರ ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ ಘಂಟೆ 10ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರವಿಶಂಕರ ಶಾಸ್ತ್ರಿ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಪ್ರೌಢಶಾಲೆ (RMSA) ವಿಟ್ಲ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಜೆ ಅಶೋಕ್ ಕುಮಾರ್‍ ರೈ, ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಿವಾಕರ ದಾಸ್ ನೇರ್ಲಾಜೆ, ಎಸ್.ಎಲ್ .ವಿ .ಬುಕ್ ಹೌಸ್, ಮೈಸೂರು, ಶ್ರೀಮತಿ ಮಲ್ಲಿಕಾ ಪಕ್ಕಳ, ಸದಸ್ಯರು ,ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ, ಹರೀಶ ಪೂಜಾರಿ , ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಪಿ ರಾಜರಾಮ್ ಶೆಟ್ಟಿ ಕೊಲ್ಲೆಗುತ್ತು , ಉಪಾಧ್ಯಕ್ಷರು ಜೇನು ಸಹಕಾರಿ ಸಂಘ ದ.ಕ, ಸುಧಾಕರ ಶೆಟ್ಟಿ ಬೀಡಿನ ಮಜಲು, ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ ದ.ಕ, ಸಂತೋಷ್ ಕುಮಾರ್‍ ಅಧ್ಯಕ್ಷರು ವಿಟ್ಲ ಜೇಸಿಐ, ವಸಂತ ಕುಮಾರ್‍ ಶೆಟ್ಟಿ , ಎರ್ಮೆನಿಲೆ ,ಅಧ್ಯಕ್ಷರು ಲಯನ್ಸ್ ಕ್ಲಬ್ ಸಿಟಿ ವಿಟ್ಲ, ರಜಿತ್ ಆಳ್ವ , ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಶಾರದಾ ಆರ್ಟ್ಸ್‌ ತಂಡದ ಐಸಿರಿ ಕಲಾವಿದೆರ್‍ , ಮಂಜೇಶ್ವರ ಅಭಿನಯಿಸುವ ತುಳುನಾಡ ರಂಗ ಬೊಳ್ಳಿ ರವಿರಾಮಕುಂಜ. ತುಳುನಾಡ ರಂಗಭೂಷಣ ಪುಷ್ಪರಾಜ್ ಬೊಲ್ಲಾರ್‍ ಮತ್ತು ಅನಿಲ್ ರಾಜ್ ಉಪ್ಪಳ ಅಶೋಕ್ ಬೇಕೂರು ಅಭಿನಯದ ’ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ವಿ.ಸೂ. 1. ಬಾಲಮುರಳಿ ಹಾಗೂ ಯಶೋಧ ಕೃಷ್ಣ ಸ್ಪರ್ಧೆಗೆ ವೇಷಭೂಷಣಗಳನ್ನು ಸ್ಪರ್ಧಾಳುಗಳೇ ಮಾಡಬೇಕು.

  1. ರಂಗೋಲಿ ಸ್ಪರ್ಧೆಗೆ ಬೇಕಾದ ಸಾಮಾಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9663892965 , 8197500192 , 9447693139

ಸ್ಪರ್ಧೆಗಳ ವಿವರ;
ಬೆಳಿಗ್ಗೆ ಘಂಟೆ 10-30: ಮಕ್ಕಳಿಗೆ , ಮಹಿಳೆಯರಿಗೆ , ಪುರುಷರಿಗೆ ವಿವಿಧ ಸ್ಪರ್ಧೆಗಳು
ಬಾಲಮುರುಳಿ – ಕೃಷ್ಣ ವೇಷ ಸ್ಪರ್ಧೆ ( 10ವರ್ಷದ ಕೆಳಗಿನ ಮಕ್ಕಳಿಗೆ )
ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ನೀಡಲಾಗುವುದು.
ಮಹಿಳೆಯರಿಗಾಗಿ ವಿಶೇಷ ಅಕರ್ಷಣಾ ಸ್ಪರ್ಧೆ
ಯಶೋಧ – ಕೃಷ್ಣ ( ವಯಸ್ಸಿನ ನಿರ್ಬಂಧ ಇಲ್ಲ )
ಕಬಡ್ಡಿ ( ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳಿಗೆ ) 8ನೇ ತರಗತಿಯ ಒಳಗಿನ ವಿದ್ಯಾರ್ಥಿಗಳಿಗೆ
ಘಂಟೆ 11-00ರಿಂದ : ರಂಗೋಲಿ ಸ್ಪರ್ಧೆ ( ಮಹಿಳೆಯರಿಗೆ )
ಮಡಕೆ ಒಡೆಯುವುದು ( ಪ್ರಾಥಮಿಕ ಶಾಲಾ ಮಕ್ಕಳಿಗೆ , ಪುರುಷರಿಗೆ , ಮಹಿಳೆಯರಿಗೆ )
ಸಂಗೀತ ಕುರ್ಚಿ ( ಪ್ರಾಥಮಿಕ , ಪ್ರೌಢ ಶಾಲಾ ಮಕ್ಕಳಿಗೆ , ಮಹಿಳೆಯರಿಗೆ )
ಲಕ್ಕಿ ಗೇಮ್ಸ್ ( ಮಹಿಳೆಯರಿಗೆ )
ಛದ್ಮ ವೇಷ ಸ್ಪರ್ಧೆ ( ಪ್ರಾಥಮಿಕ ಶಾಲಾ ಮಕ್ಕಳಿಗೆ )
ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಗುವುದು
ಹಗ್ಗ ಎಳೆಯುವ ಸ್ಪರ್ಧೆ ( ಪುರುಷರಿಗೆ ಮುಕ್ತ 520+ 5Kg )
ಮಹಿಳೆಯರ ವಿಭಾಗ ( ಮುಕ್ತ 7 ಜನರ ತಂಡ )
ಪ್ರಥಮ ಬಹುಮಾನ : ರೂ. 4,444/- ಹಾಗೂ ಶಾಶ್ವತ ಫಲಕ
ದ್ವಿತೀಯ ಬಹುಮಾನ : ರೂ. 2,222/- ಹಾಗೂ ಶಾಶ್ವತ ಫಲಕ

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಭಾಗವಹಿಸುವಂತೆ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಕೋಶಾಧಿಕಾರಿ ಹಾಗೂ ಸರ್ವಸದಸ್ಯರು ಯುವಕ ಮಂಡಲ ( ರಿ. ) ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!