Saturday, May 18, 2024
spot_imgspot_img
spot_imgspot_img

AEGIS logistics ltd.

- Advertisement -G L Acharya panikkar
- Advertisement -

ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಮಾಲಕತ್ವದ ಸಾಯಿಗಣೇಶ್ ಆಟೋ ಗ್ಯಾಸ್ ಎಲ್‌ಪಿಜಿ ಶುಭಾರಂಭ

ವಿಟ್ಲ: ವಿಟ್ಲದಲ್ಲಿ ಸುಮಾರು 34 ವರ್ಷಗಳ ಕಾಲ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಗಣೇಶ್ ಮೆಡಿಕಲ್ ಹಾಗೂ ಸಾಯಿಗಣೇಶ್ ಇಂಡೇನ್ ಗ್ಯಾಸ್ ಏಜೆನ್ಸಿ ಇದರ ಮಾಲಕರಾದ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಮಾಲಕತ್ವದ ಸಾಯಿಗಣೇಶ್ ಆಟೋ ಗ್ಯಾಸ್ ಎಲ್‌ಪಿಜಿ ವಿಟ್ಲ ಮಂಗಳೂರು ಪ್ರಮುಖ ರಸ್ತೆಯ ಬೊಬ್ಬೆಕೇರಿಯಲ್ಲಿ ಇಂದು ಶುಭಾರಂಭಗೊAಡಿತು.

ಭಾರತಕ್ಕೆ ಅತೀ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುವ ಅತೀ ದೊಡ್ಡ ಕಂಪೆನಿ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್. ಕೇಂದ್ರ ಸರಕಾರ ಸ್ವಾಮ್ಯದ ಅತೀ ದೊಡ್ಡ ಪೆಟ್ರೋಲಿಯಂ ಪ್ರಾಡಕ್ಟ್ ಕಂಪೆನಿಗಳಲ್ಲಿ ಅತೀ ಹೆಚ್ಚು ದಾಸ್ತಾನು ಹೊಂದಿರುವ ಸಾಮರ್ಥ್ಯ ಉಳ್ಳ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್ ಕಂಪೆನಿ ಇದು ರಷ್ಯಾನ್ ಮೂಲದ ಒಂದು ಅತೀ ದೊಡ್ಡ ಕಂಪೆನಿಯಾಗಿದೆ.

ಕೆ.ಎಸ್ ಕೃಷ್ಣ ಭಟ್ ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಇವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಸುಕೇಶ್ ಕುಟ್ಟಿ, ಜನರಲ್ ಮ್ಯಾನೇಜರ್ AEGIS logistics ltd. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಬಿ.ಆ್ಯಂಟೋ ಸೀನಿಯರ್ ರೀಜಿನಲ್ ಮ್ಯಾನೇಜರ್ AEGIS logistics ltd., ಅರವಿಂದ್ ಕೆ. ಗುಪ್ತ, ಪ್ರಾದೇಶಿಕ ವ್ಯವಸ್ಥಾಪಕರು AEGIS logistics ltd. ಚಂದ್ರಶೇಖರ ಭಟ್ ಕಾರ್ಯದರ್ಶಿ,ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ, ಮೊಹಮ್ಮದ್ ಇಕ್ಬಾಲ್ ಹಾನೆಸ್ಟ್ ಸಂಚಾಲಕರು, ಹೊರೈಝಾನ್ ಪಬ್ಲಿಕ್ ಸ್ಕೂಲ್ ಮೇಗಿನಪೇಟೆ ವಿಟ್ಲ, ಜಗನ್ನಾಥ ಸಾಲ್ಯಾನ್ ಅಧ್ಯಕ್ಷರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಯನ್.ಕೆ ಮಹಾಬಲೇಶ್ವರ ಭಟ್ ಆಡಳಿತ ಮೊಕ್ತೇಸರರು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಕೋಡಪದವು, ಎಂ.ನಿತ್ಯಾನAದ ನಾಯಕ್ ಉದ್ಯಮಿಗಳು ನಾಯಕ್ಸ್ ಫ್ಯಾಮಿಲಿ ವಿಟ್ಲ, ನಾಗರಾಜ ಹೆಚ್.ಇ, ಇನ್‌ಸ್ಪೆಕ್ಟರ್ ಆರಕ್ಷಕ ಠಾಣೆ ವಿಟ್ಲ, ಹರೀಶ್ ಸಿ ಎಚ್ ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ವಸಂತ್ ಶಿವಾಜಿನಗರ ಅಧ್ಯಕ್ಷರು ಬಿ ಎಂ ಎಸ್ ಅಟೋ ಚಾಲಕ ಮಾಲಕರ ಸಂಘ ವಿಟ್ಲ, ರಮೇಶ್ ಶಿವಾಜಿನಗರ ಅಧ್ಯಕ್ಷರು, ಫೆಡೆರೇಶನ್ ಆಫ್ ಆಟೋ ರಿಕ್ಷಾ ಯೂನಿಯನ್ (C.I.T.U) ವಿಟ್ಲ, ಆರಂಗಳ ಇಸುಫ್ ಕುಳಾಲು, ಹಿರಿಯ ರಿಕ್ಷಾ ಚಾಲಕರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಕೇಶ್ ಕುಟ್ಟಿ, ಜನರಲ್ ಮ್ಯಾನೇಜರ್ AEGIS logistics ltd. ಹಾಗೂ ಅರವಿಂದ್ ಕೆ. ಗುಪ್ತ, ಪ್ರಾದೇಶಿಕ ವ್ಯವಸ್ಥಾಪಕರು AEGIS logistics ltd. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಆರಂಗಳ ಇಸುಫ್ ಕುಳಾಲು, ಹಿರಿಯ ರಿಕ್ಷಾ ಚಾಲಕರು ಇವರು ತಮ್ಮ ಆಟೋಗೆ ಗ್ಯಾಸ್ ತುಂಬಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಸಾಯಿಗಣೇಶ್ ಆಟೋ ಗ್ಯಾಸ್ ಎಲ್‌ಪಿಜಿ ಇದರ ಮಾಲಕರಾದ ಸತೀಶ್ ಕುಮಾರ್ ಆಳ್ವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಚಂದ್ರಶೇಖರ್ ರೈ ಕೊಲ್ಯ ಧನ್ಯವಾದಗೈದರು. ಮೌಶ್ಮಿ ಶೆಟ್ಟಿ ಪ್ರಾರ್ಥಿಸಿ, ಶ್ರೀಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಸಾಯಿಗಣೇಶ್ ಆಟೋ ಗ್ಯಾಸ್ ಎಲ್‌ಪಿಜಿ AEGIS logistics ltd. ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡಿದೆ.
1. ಮೊದಲ ಬಾರಿಗೆ ತಮ್ಮ ಆಟೋಗಳಿಗೆ ಗ್ಯಾಸ್ ತುಂಬಿಸಲು ಬರುವ ಗ್ರಾಹಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಗುವುದು

2. ಪ್ರತೀ 20 ಲೀಟರ್ ಗ್ಯಾಸ್ ಖರೀದಿ ಗ್ರಾಹಕರಿಗೆ 1ಲೀಟರ್ ಗ್ಯಾಸ್ ಉಚಿತವಾಗಿ ನೀಡಲಾಗುವುದು.

- Advertisement -

Related news

error: Content is protected !!