Friday, June 12, 2026
spot_imgspot_img
spot_imgspot_img

ವಿಟ್ಲ: (ಆ.6) ಚಂದಳಿಕೆ ಯುವಕೇಸರಿ ಅಬೀರಿ ಅತಿಕಾರಬೈಲು (ರಿ.) ಇದರ ವತಿಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರಿಗೆ ಗೌರವಾರ್ಪಣೆ ಹಾಗೂ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಚಂದಳಿಕೆ ಯುವಕೇಸರಿ ಅಬೀರಿ ಅತಿಕಾರಬೈಲು (ರಿ.) ಇದರ ವತಿಯಿಂದ ಆ.6 ರಂದು ಬೆಳಿಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್‍ ರೈ ಕೋಡಿಂಬಾಡಿ ಇವರಿಗೆ ಗೌರವಾರ್ಪಣೆ ಹಾಗೂ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮವು ಯುವ ಕೇಸರಿ ಕಾರ್ಯಾಲಯ, ಚಂದಳಿಕೆ ಇಲ್ಲಿ ನಡೆಯಲಿದೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯುವಕೇಸರಿ ಅಬೀರಿ ಅತಿಕಾರಬೈಲು(ರಿ.)ಚಂದಳಿಕೆ ಇದರ ಅಧ್ಯಕ್ಷರಾದ ಗಣೇಶ್ ಪೂಜಾರಿ ಪಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ.

ಪುತ್ತೂರು ಶಾಸಕ ಅಶೋಕ್ ಕುಮಾರ್‍ ರೈ ಕೋಡಿಂಬಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್, ಪುತ್ತೂರು ಐಟಿಟಿ ಉಪವಲಯ ಅರಣ್ಯಾಧಿಕಾರಿ ಲೋಕೇಶ್ ಎಸ್.ಎನ್, ಚಂದಳಿಕೆ ಯುವಕೇಸರಿ ಅಬೀರಿ ಅತಿಕಾರಬೈಲು(ರಿ.) ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಚಂದಳಿಕೆ ಉದ್ಯಮಿ ದೇಜಪ್ಪ ಪೂಜಾರಿ ನಿಡ್ಯ, ವಿಟ್ಲ ಪ.ಪಂ.ಸದಸ್ಯ ರಕ್ಷಿತಾ ಸನತ್ ಸಾಲ್ಯಾನ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!