ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋನಪ್ಪ ಗೌಡ.ಕೆ. ವಯೋ ನಿವೃತ್ತಿ ಹೊಂದಿದ್ದಾರೆ.
ಕೂಡೂರು ದೇವಪ್ಪ ಗೌಡ ಮತ್ತು ಸೇಸಮ್ಮ ದಂಪತಿಗಳ ಪುತ್ರರಾಗಿರುವ ಮೋನಪ್ಪ ಗೌಡ.ಕೆರವರು1981 ಆ1ರಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗ ಆರಂಭಿಸಿದ್ದರು.
ಆರಂಭದಲ್ಲಿ ಮೂರು ವರ್ಷಗಳ ಕಾಲದಿನಗೂಲಿ ನೌಕರನಾಗಿದ್ದು 1984ರಲ್ಲಿ ಖಾಯಂ ನೌಕರನಾಗಿ ಎಲ್ಲಾ ಹುದ್ದೆಗಳಲ್ಲಿ ತನ್ನ ಜವಾಬ್ದಾರಿಯುತ ಸೇವೆಗಳನ್ನು ಸಲ್ಲಿಸಿ 2019ರ ಜ.1ರಿಂದ ಮುಖ್ಯಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ಜೂ.30ರಂದು ಸೇವೆಯಿಂದ ವಯೋ ನಿವೃತ್ತಿಯನ್ನು ಹೊಂದಿದ್ದಾರೆ. ಒಟ್ಟು39ವರುಷಗಳ ಕಾಲ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರು ಪ್ರಸ್ತುತ ವಿಟ್ಲ ಲಯನ್ಸ್ ಕ್ಲಬ್‌ನಲ್ಲಿ ಪ್ರಥಮ ಉಪಾಧ್ಯಕ್ಷರಾಗಿ, ವಿಟ್ಲ ಶಾರದೋತ್ಸವ ಸಮಿತಿಯ ಕೋಶಾಧಿಕಾರಿಯಾಗಿ, ವಿಟ್ಲ ಮಾದರಿ ಹಿ.ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ವಿಶ್ವ ಹಿಂದೂ ಪರಿಷದ್‌ನ ಗಣೇಶೋತ್ಸವ ಸಮಿತಿಯಲ್ಲಿ ಮಾಜಿ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಗೌಡ ಯಾನೆ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷರಾಗಿ, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಮೋನಪ್ಪ ಗೌಡ.ಕೆ.ರವರು ಪತ್ನಿ ಬಂಟ್ವಾಳ ತಾಲೂಕು ಕಚೇರಿ ಉದ್ಯೋಗಿ ಸತ್ಯಶಂಕರಿ, ಪುತ್ರ ಕರ್ನಾಟಕ ಬ್ಯಾಂಕ್ ನ ರಾಜಸ್ಥಾನದ ಬಿಲ್ವಾರ ಶಾಖೆಯ ಸಿಬಂದಿ ಭರತ್ ಎಂ.ಕೆ, ಪುತ್ರಿ ಬಿ.ಎಡ್ ವಿದ್ಯಾರ್ಥಿನಿ ಸುಪ್ರಿತಾ ಕೆ.ಎಂ ರವರೊಂದಿಗೆ ವಿಟ್ಲ ಶಿವಾಜಿನಗರದಲ್ಲಿ ವಾಸವಾಗಿದ್ದಾರೆ.