Tuesday, July 1, 2025
spot_imgspot_img
spot_imgspot_img

ಬಂಟ್ವಾಳ: ನೇತ್ರಾವತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ತೋಡಿನ ಹೂಳೆತ್ತುವ ಕೆಲಸ

- Advertisement -
- Advertisement -

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನೇತ್ರಾವತಿ ಸಂಜೀವಿನಿ ಒಕ್ಕೂಟದ ಸಂಜೀವಿನಿ ಸದಸ್ಯರು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಒಕ್ಕೂಟದ ಮಹಿಳೆಯರು ತೋಡಿನ ಹೂಳೆತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಸತತವಾಗಿ ಒಂದು ತಿಂಗಳಿನಿಂದ ಕೆಲಸವನ್ನು ಮಾಡುತ್ತಿದ್ದು, ಹತ್ತರಿಂದ ಹದಿನೈದು ಜನ ಭಾಗವಹಿಸುತ್ತಿದ್ದಾರೆ.

ತೋಡಿನಲ್ಲಿ ತುಂಬಿದ ಪ್ಲಾಸ್ಟಿಕ್, ಹಾಳೆತಟ್ಟೆ, ದಟ್ಟವಾದ ಸಸ್ಯಗಳಿಂದಾಗಿ ತೋಡಿನಲ್ಲಿ ನೀರು ಹರಿಯುವುದು ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ನೀರು ತೋಟಕ್ಕೆ ನುಗ್ಗಿ ಅಧಿಕ ಪ್ರಮಾಣದ ಬೆಳೆ ನಷ್ಟವಾಗುತ್ತಿತ್ತು. ಅಲ್ಲದೆ ನಡೆಯಲು ಬದುಗಳಿಲ್ಲದೆ ತೋಟಕ್ಕೆ ಹೋಗುವುದು ಸಂಕಷ್ಟಕರವಾಗಿತ್ತು. ಸಂಜೀವಿನಿ ಮಹಿಳೆಯರ ಉತ್ಸಾಹದಾಯಕ ಪರಿಶ್ರಮದಿಂದ ನೀರಿನ ಹರಿವು ಸರಾಗವಾಗಲಿದೆ. ತೋಟಗಳಿಗೆ ನೀರು ಹೋಗುವುದನ್ನು ತಡೆಯಬಹುದಾಗಿದೆ. ಹೂಳೆತ್ತುವುದರ ಜೊತೆಗೆ ತೋಟಕ್ಕೆ ಹೋಗಲು ಬದುಗಳನ್ನು ನಿರ್ಮಿಸಿರುವುದು ಸಮೀಪದ ಸಾರ್ವಜನಿಕರಲ್ಲಿ ಸಂತಸ ತಂದಿದೆ.


ಈ ಕೆಲಸಕ್ಕೆ ಪಂಚಾಯತ್ ಗ್ರಾಮಭಿವೃದ್ದಿ ಅಧಿಕಾರಿ ರೋಹಿಣಿ ಇವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿರುತ್ತಾರೆ.

- Advertisement -

Related news

error: Content is protected !!