ವಿಟ್ಲ: ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ವಿಟ್ಲ ಇದರ ವತಿಯಿಂದ ದೀಪಾವಳಿ ಹಬ್ಬದ ಆಚರಣೆ ಹಾಗೂ ನಿವೃತ್ತ ಮಾಜಿ ಸೈನಿಕರಿಗೆ ಗೌರವಾರ್ಪಣೆ ಮತ್ತು ಹಿರಿಯ ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವೂ ದಿನಾಂಕ 17.11.2020 ಮಂಗಳವಾರ ಸಂಜೆ 6.00 ಗಂಟೆಗೆ ಯೋಗೀಶ್ವರ ಮಠ ಬಳಿಯ ಶಿವಪ್ಪ ನಾಯ್ಕ್ ಜೋಗಿಮಠ ಅವರ ಮನೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಯೋಗೀಶ್ವರ ಮಠದ ಶ್ರೀ ಶ್ರಾದ್ಧನಾಥ್ ಜೀ ಸ್ವಾಮೀಜಿ ಯವರು ಹಾಗೂ ದ.ಕ ಬಿಜೆಪಿ ಹಿಂದುಳಿದ ವರ್ಗ ಮೋರ್ಚ ದ ಜಿಲ್ಲಾ ಅಧ್ಯಕ್ಷ ರಾದ ಆರ್ ಸಿ ನಾರಾಯಣ್. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರವೀಶ್ ವಿಟ್ಲ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಬಿಜೆಪಿ ಗ್ರಾಮಾಂತರ ಮಂಡಲ ರೈತ ಮೋರ್ಚ್ ಕಾರ್ಯದರ್ಶಿ ಪುನೀತ್ ಮಾಡತ್ತಾರ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವ ಮೋರ್ಚ್ ಉಪಾಧ್ಯಕ್ಷ ಶ್ರವಣ್. ಪ್ರಭಾರಿಗಳಾದ ಮೋಹನ್ ದಾಸ್ ಉಕ್ಕುಡ ಭಾಗವಹಿಸಿದ್ದರು.


ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅರುಣ್ ವಿಟ್ಲ..ಕಾರ್ಯದರ್ಶಿಗಳಾದ ಕರುಣಾಕರ ನಾಯ್ತೋಟು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.



