Friday, August 7, 2026
spot_imgspot_img
spot_imgspot_img

ವಿಟ್ಲ: ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರೀ ಅನಾಹುತ

- Advertisement -
- Advertisement -

ವಿಟ್ಲ: ನಿಂತಿದ್ದ ಕಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕ್ರೇಟಾ ಗಾಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮೊಬೈಲ್ ಚಾರ್ಜ್ ಗೆ ಇಟ್ಟಿದ್ದ ವೇಳೆ ಮೊಬೈಲ್ ಸ್ಪೋಟದಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಹಾಗೂ ಆಟೋ ಚಾಲಕರು ಬೆಂಕಿಯನ್ನು ನಂದಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಮೊಬೈಲ್ ಸ್ಪೋಟದಿಂದ ಕಾರ್‌ನ ಒಳಭಾಗದಲ್ಲಿ ಬೆಂಕಿ ಉರಿದ ಕಾರಣ ಹಾನಿಯಾಗಿದೆ. ಅಂತೆಯೇ ಕಾರಿನಲ್ಲಿದ್ದ ಬೇರೆ ಮೊಬೈಲ್‌ಗಳೂ ಹಾನಿಯಾಗಿದೆ.

- Advertisement -

Related news

error: Content is protected !!